Saturday, May 4, 2024
Homeತಾಜಾ ಸುದ್ದಿರೇಟಿಂಗ್ ನಲ್ಲಿ ಹೊಸ ದಾಖಲೆ ಬರೆದ 'ಮಹಾಭಾರತ' ಮತ್ತು 'ರಾಧಾಕೃಷ್ಣ' ಧಾರಾವಾಹಿ

ರೇಟಿಂಗ್ ನಲ್ಲಿ ಹೊಸ ದಾಖಲೆ ಬರೆದ ‘ಮಹಾಭಾರತ’ ಮತ್ತು ‘ರಾಧಾಕೃಷ್ಣ’ ಧಾರಾವಾಹಿ

spot_img
- Advertisement -
- Advertisement -

ಬೆಂಗಳೂರು: ಲಾಕ್‌ಡೌನ್‌ನಿಂದ ಸಿನಿಮಾ, ಸೀರಿಯಲ್‌, ರಿಯಾಲಿಟಿ ಶೋಗಳ ಶೂಟಿಂಗ್‌ ಸ್ಥಗಿತಗೊಂಡಿದ್ದರಿಂದ ಕೆಲವು ಕಾರ್ಯಕ್ರಮಗಳ ಮರುಪ್ರಸಾರ ಅನಿವಾರ್ಯ ಆಗಿತ್ತು. ಕನ್ನಡ, ಹಿಂದಿ ಮಾತ್ರವಲ್ಲದೆ ಬಹುತೇಕ ಎಲ್ಲ ಭಾಷೆಯ ವಾಹಿನಿಗಳು ಇದೇ ಸೂತ್ರ ಅನುಸರಿಸಿದವು. ಇದರೊಂದಿಗೆ ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಡಬ್ಬಿಂಗ್ ಧಾರಾವಾಹಿಗಳು ಪ್ರಸಾರವಾಗುತ್ತಿವೆ.

ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮಹಾಭಾರತ ಕಳೆದ ವಾರ 6.6 ಮತ್ತು ರಾಧಾಕೃಷ್ಣ 6.4 ರೇಟಿಂಗ್ ಪಡೆದಿವೆ. ಇತ್ತೀಚಿಗಂತೂ ಮಹಾಭಾರತ ಧಾರಾವಾಹಿಯ ರೋಮಾಂಚನಕಾರಿ ಸನ್ನಿವೇಶಗಳು ಪ್ರೇಕ್ಷಕರಲ್ಲಿ ಬಾರಿ ಗಮನ ಸೆಳೆಯುವಂತೆ ಮಾಡುತ್ತಿದೆ.

ಮಹಾಭಾರತದ ಪ್ರತಿಯೊಂದು ಸಂಚಿಕೆಯನ್ನು ಪ್ರೇಕ್ಷಕರು ಮಿಸ್ ಮಾಡದೇ ವೀಕ್ಷಿಸುತ್ತಿದ್ದಾರೆ. ಈ ಮೂಲಕ ಈ ಎರಡೂ ಧಾರಾವಾಹಿಗಳು ದಾಖಲೆ ಸೃಷ್ಟಿಸಿವೆ.

ಸ್ವಸ್ತಿಕ್‌‌ ಪ್ರೊಡಕ್ಷನ್ಸ್‌ ಕಂಪನಿ ನಿರ್ಮಿಸಿದ ಮಹಾಭಾರತ ಧಾರಾವಾಹಿಯು ಸೆಪ್ಟೆಂಬರ್‌ 2013ರಿಂದ ಆಗಸ್ಟ್‌ 2014ರವರೆಗೆ ಹಿಂದಿಯ ‘ಸ್ಟಾರ್‌ ಪ್ಲಸ್‌’ ವಾಹಿನಿಯಲ್ಲಿ ಪ್ರಸಾರ ಆಗಿತ್ತು. ಒಟ್ಟು 276 ಸಂಚಿಕೆಗಳಲ್ಲಿ ಮೂಡಿಬಂದಿತ್ತು.

276 ಸಂಚಿಕೆಗಳನ್ನು ಒಳಗೊಂಡ ಈ ‘ಮಹಾಭಾರತ’ವನ್ನು ಸಿದ್ದಾರ್ಥ್‌ ಆನಂದ್‌, ಮುಕೇಶ್‌ ಕುಮಾರ್‌ ಸಿಂಗ್‌ ಸೇರಿದಂತೆ ಐವರು ನಿರ್ದೇಶಿಸಿದ್ದರು. ಸೌರಭ್‌ ರಾಜ್‌ ಜೈನ್‌, ಶಾಹೀರ್‌ ಶೇಕ್‌, ಪೂಜಾ ಶರ್ಮಾ, ಆರವ್‌ ಚೌಧರಿ, ಪ್ರಣೀತ್‌ ಭಟ್‌ ಮುಂತಾದವರು ಮುಖ್ಯ ಪಾತ್ರಗಳನ್ನು ನಿಭಾಯಿಸಿರುವ ಈ ಧಾರಾವಾಹಿಗೆ ಸಂಗೀತ ನೀಡಿರುವುದು ಖ್ಯಾತ ಸಂಗೀತ ಸಂಯೋಜಕರಾದ ಇಸ್ಮಾಯಿಲ್‌ ದರ್ಬಾರ್‌ ಹಾಗೂ ಅಜಯ್‌-ಅತುಲ್‌.

- Advertisement -
spot_img

Latest News

error: Content is protected !!