Saturday, May 18, 2024
Homeಕರಾವಳಿಉಡುಪಿಉಡುಪಿ: ಕಾಡಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಕಾಡು ಪ್ರಾಣಿಗಳಿಗೆ ನೆರವಾದ ಅರಣ್ಯ ಇಲಾಖೆ

ಉಡುಪಿ: ಕಾಡಿನಲ್ಲಿ ನೀರಿನ ತೊಟ್ಟಿ ನಿರ್ಮಿಸಿ ಕಾಡು ಪ್ರಾಣಿಗಳಿಗೆ ನೆರವಾದ ಅರಣ್ಯ ಇಲಾಖೆ

spot_img
- Advertisement -
- Advertisement -

ಉಡುಪಿ: ಬಿರು ಬಿಸಿಲಿನ ಹಿನ್ನೆಲೆಯಲ್ಲಿ ಸಂರಕ್ಷಿತ ಅರಣ್ಯದಲ್ಲಿನ ಕಾಡು ಪ್ರಾಣಿಗಳಿಗೆ ಕುಡಿಯುವ ನೀರು ಪೂರೈಸಿ ಅರಣ್ಯ ಇಲಾಖೆ ಗಮನ ಸೆಳೆದಿದೆ.

ಕುಂದಾಪುರ ತಾಲೂಕಿನ ಕಮಲಶಿಲೆಯಲ್ಲಿರುವ ಸಂರಕ್ಷಿತ ಅರಣ್ಯದಲ್ಲಿ ಸಿದ್ದಾಪುರ ಅರಣ್ಯ ವಿಭಾಗದಿಂದ ಕಾಡಿನಲ್ಲಿ ನೀರಿನ ತೊಟ್ಟಿ ನಿರ್ಮಾಣ ಮಾಡಲಾಗಿದೆ.

ಬಾವಿಗೆ ಅಳವಡಿಸುವ ರಿಂಗ್‌ ಬಳಸಿ ಕೊಳ ನಿರ್ಮಾಣ ಮಾಡಿ ಕಮಲಶಿಲೆ ಕಾಡಿನಲ್ಲಿ ಸುಮಾರು 15 ಕಡೆಗಳಲ್ಲಿ ನೀರು ಪೂರೈಕೆಗೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕಾಡಿನೊಳಗಿರುವ ಹೊಳೆಗಳು ಬೇಸಿಗೆಯಿಂದ ಬತ್ತಿರುವ ಹಿನ್ನೆಲೆಯಲ್ಲಿ ಎರಡು ದಿನಗಳಿಗೊಮ್ಮೆ ಟ್ಯಾಂಕರ್‌ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ.

ನೀರಿನ ತೊಟ್ಟಿಯಲ್ಲಿ ಕಾಡು ಪ್ರಾಣಿಗಳು ನೀರು ಕುಡಿದು ದಾಹ ತಣಿಸಿಕೊಳ್ಳುತ್ತಿರುವ ದೃಶ್ಯಗಳು
ಅರಣ್ಯ ಇಲಾಖೆ ಅಳವಡಿಸಿದ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ.

- Advertisement -
spot_img

Latest News

error: Content is protected !!