Friday, June 5, 2026
Homeಕರಾವಳಿಮಂಗಳೂರುಧರ್ಮಸ್ಥಳ : ನೇತ್ರಾವತಿ‌ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು; ಬಿಸಿಲಿನ ತಾಪಕ್ಕೆ ವ್ಯಕ್ತಿ ಸಾವನ್ನಪ್ಪಿರುವ...

ಧರ್ಮಸ್ಥಳ : ನೇತ್ರಾವತಿ‌ ಬಳಿ ಕುಸಿದು ಬಿದ್ದು ವ್ಯಕ್ತಿ ಸಾವು; ಬಿಸಿಲಿನ ತಾಪಕ್ಕೆ ವ್ಯಕ್ತಿ ಸಾವನ್ನಪ್ಪಿರುವ ಶಂಕೆ

- Advertisement -
- Advertisement -

ಬೆಳ್ತಂಗಡಿ : ಕುಳಿತ್ತಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ ಘಟನೆ ಮೇ.4ರಂದು ಧರ್ಮಸ್ಥಳದ ನೇತ್ರಾವತಿ ನದಿ ಬಳಿಯ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಪಕ್ಕದಲ್ಲಿ ಸಂಭವಿಸಿದೆ.

ದಾವಣಗೆರೆ ನಿವಾಸಿ ಮಹಾರುದ್ರ ಸ್ವಾಮಿ (42) ಎಂಬಾತ ಮಧ್ಯಾಹ್ನ ಧರ್ಮಸ್ಥಳ ಗ್ರಾಮದ ನೇತ್ರಾವತಿ ನದಿಯ ಪಕ್ಕದ ರಾಷ್ಟ್ರೀಯ ಹೆದ್ದಾರಿಯ ರಸ್ತೆಯ ಬಳಿ ನೀರಿನ ಬಾಟಲ್ ಹಿಡಿದು ಕುಳಿತ್ತಿದ್ದು, ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.

ಸ್ಥಳಕ್ಕೆ ಧರ್ಮಸ್ಥಳ ಪೊಲೀಸರು ಆಗಮಿಸಿ ಪರಿಶೀಲಿಸಿದ್ದಾರೆ. ಬಳಿಕ ಮೃತದೇಹವನ್ನು ವೇಣೂರು ಹಾಗೂ ಧರ್ಮಸ್ಥಳ ಶೌರ್ಯ ತಂಡದ ಸಹಕಾರದಲ್ಲಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

- Advertisement -

Latest News

error: Content is protected !!