Monday, June 8, 2026
Homeತಾಜಾ ಸುದ್ದಿಅಪಾರ್ಟ್​​ಮೆಂಟ್​​ ಟ್ಯಾಂಕ್​​ ಗೆ ಹಾರಿ ಮಹಿಳೆ ಆತ್ಮಹತ್ಯೆ; ಅದೇ ನೀರು 2 ದಿನ ಕುಡಿದಿದ್ದ ನಿವಾಸಿಗಳು..!

ಅಪಾರ್ಟ್​​ಮೆಂಟ್​​ ಟ್ಯಾಂಕ್​​ ಗೆ ಹಾರಿ ಮಹಿಳೆ ಆತ್ಮಹತ್ಯೆ; ಅದೇ ನೀರು 2 ದಿನ ಕುಡಿದಿದ್ದ ನಿವಾಸಿಗಳು..!

- Advertisement -
- Advertisement -

ಬೆಂಗಳೂರು: ಅಪಾರ್ಟ್​ಮೆಂಟ್​ನ ಕುಡಿಯುವ ನೀರಿನ ಟ್ಯಾಂಕ್​ಗೆ ಬಿದ್ದು ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರಿನ ಯಲಹಂಕ ನ್ಯೂ ಟೌನ್​ನಲ್ಲಿ ನಡೆದಿದೆ.

ಇಲ್ಲಿನ ನಾಲ್ಕನೆ ಹಂತದ ಅಪಾರ್ಟ್​ಮೆಂಟ್​​ವೊಂದರಲ್ಲಿ ವಾಸವಿದ್ದ 50 ವರ್ಷದ ಗೌರಿ ಎಂಬ ಗೃಹಿಣಿ ಶುಕ್ರವಾರದಿಂದ ನಾಪತ್ತೆಯಾಗಿದ್ದರು. ಈ ಹಿನ್ನೆಲೆ ಕುಟುಂಬಸ್ಧರು ಪೊಲೀಸರಿಗೆ ದೂರು ನೀಡಿದ್ದರು. ಆದರೆ ನಿನ್ನೆ ಮಹಿಳೆ ಕುಡಿಯುವ ನೀರಿನ ಟ್ಯಾಂಕ್​ನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ.

ಹಣಕಾಸಿನ‌ ವಿಚಾರವಾಗಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರಬಹುದೆಂಬ ಶಂಕೆ ವ್ಯಕ್ತವಾಗಿದೆ. ಸದ್ಯ ಮೃತದೇಹವನ್ನು ಹೊರೆಗೆದು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ. ಘಟನೆ ಸಂಬಂಧ ಮಾಹಿತಿ ಪಡೆದಿರುವ ಯಲಹಂಕ ನ್ಯೂಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಕೊರೋನಾ ಆತಂಕದಲ್ಲಿ 60ಕ್ಕೂ ಅಧಿಕ ಕುಟುಂಬಗಳು
ಸುಮಾರು ಅರವತ್ತಕ್ಕೂ ಅಧಿಕ ಕುಟುಂಬಗಳು ಆ ಅಪಾರ್ಟ್​ಮೆಂಟ್​ನಲ್ಲಿ ವಾಸಿಸುತ್ತಿದ್ದು, ಕಳೆದ ಮೂರು ದಿನಗಳಿಂದ ಎಲ್ಲರೂ ಅದೇ ನೀರನ್ನು ದಿನನಿತ್ಯದ ಕಾರ್ಯಗಳಿಗೆ ಬಳಸಿಕೊಂಡಿದ್ದಾರೆ. ಇದೀಗ ಟ್ಯಾಂಕ್​ನಲ್ಲಿ ಶವ ಪತ್ತೆಯಾಗಿದ್ದರಿಂದ ಅಪಾರ್ಟ್​ಮೆಂಟ್ ​ನಿವಾಸಿಗಳು ಆತಂಕಗೊಂಡಿದ್ದಾರೆ. ಮಹಿಳೆಗೆ ಕೊರೊನಾ ಇದ್ಯಾ ಇಲ್ವಾ ಎಂಬುದರ ಬಗ್ಗೆ ತಪಾಸಣೆ ಮಾಡಲಾಗುತ್ತಿದೆ.

- Advertisement -

Latest News

error: Content is protected !!