Thursday, June 25, 2026
Homeತಾಜಾ ಸುದ್ದಿಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ದಂಪತಿ: ಈ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ...

ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣು ಬೆಳೆದ ದಂಪತಿ: ಈ ಮಾವಿನ ಹಣ್ಣಿನ ಬೆಲೆ ಕೇಳಿದ್ರೆ ನೀವು ಸುಸ್ತಾಗೋದು ಗ್ಯಾರಂಟಿ

- Advertisement -
- Advertisement -

ಮಧ್ಯಪ್ರದೇಶ:ಜಗತ್ತಿನ ಅತ್ಯಂತ ದುಬಾರಿ ತಳಿಯ ಮಾವಿನ ಹಣ್ಣುಗಳನ್ನು ಮಧ್ಯ ಪ್ರದೇಶದ ಜಬಾಲ್ಪುರ ದಂಪತಿ ಬೆಳೆದಿದ್ದಾರೆ.

ರಾಣಿ ಹಾಗೂ ಸಂಕಲ್ಪ್‌ ಪರಿಹಾರ್‌ ದಂಪತಿ ತಾವು ಕೆಲ ವರ್ಷಗಳ ಹಿಂದೆ ಕೇವಲ ಎರಡು ಮಾವಿನ ಸಸಿಗಳನ್ನು ಬೆಳೆಯಲು ಆರಂಭಿಸಿದ್ದಾಗಿಯೂ, ಅದು ತಮಗೇ ಅಚ್ಚರಿಯಾಗುವ ಹಾಗೆ ಜಪಾನ್‌ನ ಮಿಯಾಜ಼ಾಕಿ ತಳಿಯದ್ದೆಂದು ನಂತರ ತಿಳಿದು ಬಂದಿದ್ದಾಗಿ ಹೇಳಿದ್ದಾರೆ.

ಚೆನ್ನೈಗೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ವ್ಯಕ್ತಿಯೊಬ್ಬರಿಂದ ತಮಗೆ ಈ ಸಸಿಗಳು ಸಿಕ್ಕಿದ್ದಾಗಿ ಪರಿಹಾರ್‌ ತಿಳಿಸಿದ್ದು, ಆ ವೇಳೆಯಲ್ಲಿ ಅವು ಮಯಾಜ಼ಾಕಿ ಮಾವಿನ ಸಸಿಗಳು ಎಂದು ಗೊತ್ತಿರಲಿಲ್ಲ ಎಂದಿದ್ದಾರೆ.

ತಾವು ಬೆಳೆದ ಒಂದೇ ಒಂದು ಮಾವಿನ ಹಣ್ಣಿಗೆ 21,000 ರೂಪಾಯಿಯಷ್ಟು ಬೆಲೆ ಕೊಡುವುದಾಗಿ ಹೇಳಿಕೊಂಡು ಅನೇಕ ಮಂದಿ ಸಂಪರ್ಕಿಸಿದ್ದಾಗಿ ರಾಣಿ ತಿಳಿಸಿದ್ದಾರೆ. ಕಳೆದ ವರ್ಷ ಮಾರುಕಟ್ಟೆಯಲ್ಲಿ 2.70 ಲಕ್ಷ ರೂ./ಕಿಲೋ ದರದಲ್ಲಿ ಮಾರಾಟವಾದ ಮಿಯಾಜ಼ಾಕಿ ಮಾವಿನ ಹಣ್ಣು ಜಗತ್ತಿನ ಅತ್ಯಂತ ದುಬಾರಿ ಮಾವಿನ ಹಣ್ಣುಗಳಲ್ಲಿ ಒಂದಾಗಿದೆ.

- Advertisement -

Latest News

error: Content is protected !!