Wednesday, June 3, 2026
Homeಕೊಡಗುಸಾವಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಆಶಾ ಟೀಚರ್; ಅಂಗಾಂಗ ದಾನದಿಂದ ಸಿಕ್ತು 8 ಜನರಿಗೆ ಹೊಸ...

ಸಾವಿನಲ್ಲೂ ಸಾರ್ಥಕತೆ ಮೆರೆದ ಮಡಿಕೇರಿಯ ಆಶಾ ಟೀಚರ್; ಅಂಗಾಂಗ ದಾನದಿಂದ ಸಿಕ್ತು 8 ಜನರಿಗೆ ಹೊಸ ಬದುಕು

- Advertisement -
- Advertisement -

ಮಡಿಕೇರಿ; ಇಲ್ಲಿನ ಸುದರ್ಶನ ಬಡಾವಣೆಯ ನಿವಾಸಿ ಶಿಕ್ಷಕಿ ಆಶಾ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ತನ್ನ ಅಂಗಾಂಗ ದಾನ ಮಾಡಿ 8 ಜನರ ಜೀವ ಉಳಿಸಿದ್ದಾರೆ.


ಬೇಬಿ ಸಿಟ್ಟಿಂಗ್ ನಡೆಸುತ್ತಿದ್ದ ಆಶಾ (53) ಕಳೆದ ಶನಿವಾರ ಬೆಂಗಳೂರಿನಲ್ಲಿರುವ ಪುತ್ರಿ ಮನೆಗೆ ಹೋಗಿದ್ದರು.ಈ ವೇಳೆ ಅನಾರೋಗ್ಯಕ್ಕೆ ತುತ್ತಾಗಿ ಪಾರ್ಶ್ವವಾಯುವಿಗೆ ಒಳಗಾಗಿದ್ದರು. ತಕ್ಷಣವೇ ನಾರಾಯಣ ಹೃದಯಾಲಯ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಅವರ ಮೆದುಳು ನಿಷ್ಕ್ರಿಯಗೊಂಡಿರುವುದಾಗಿ ವೈದ್ಯರು ಹೇಳಿದರು.

ವೈದ್ಯರ ಸಲಹೆ ಮೇರೆಗೆ ಅಂಗಾಂಗ ದಾನಕ್ಕೆ ಆಶಾ ಅವರ ಪತಿ, ಮಕ್ಕಳ ಒಪ್ಪಿಗೆ ಪಡೆಯಲಾಯಿತು. ಬಳಿಕ ಬೆಂಗಳೂರು ನಾರಾಯಣ ಹೃದಯಾಲಯದಲ್ಲಿ ಅಂಗಾಂಗವನ್ನು ಬೇರ್ಪಡಿಸಿ 8 ಜನರಿಗೆ ಕಸಿ ಮಾಡಲಾಗಿದೆ. ಕಣ್ಣು, ಕಿಡ್ನಿ, ಹೃದಯ, ಲಿವರ್ ದಾನದ ಮೂಲಕ ಆಶಾ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

- Advertisement -

Latest News

error: Content is protected !!