Thursday, June 4, 2026
HomeUncategorizedಪುತ್ತೂರಿನಲ್ಲೊಂದು ಅಚ್ಚರಿಯ ಘಟನೆ; ಕಾರಿಗೆ ಡಿಕ್ಕಿ ಹೊಡೆದು ಕಾರಿನ ಬಂಪರ್ ನಲ್ಲಿ 70 ಕಿಲೋ ಮೀಟರ್...

ಪುತ್ತೂರಿನಲ್ಲೊಂದು ಅಚ್ಚರಿಯ ಘಟನೆ; ಕಾರಿಗೆ ಡಿಕ್ಕಿ ಹೊಡೆದು ಕಾರಿನ ಬಂಪರ್ ನಲ್ಲಿ 70 ಕಿಲೋ ಮೀಟರ್ ದೂರ ಸಾಗಿದ್ರು ಬದುಕಿ ಉಳಿದ ನಾಯಿ

- Advertisement -
- Advertisement -

ಪುತ್ತೂರು; ಅದೃಷ್ಟ ಇದ್ರೆ ಯಾರಾದ್ರೂ ಹೇಗಾದ್ರೂ ಬದುಕಿ ಉಳಿಯುತ್ತಾರೆ ಅನ್ನೋದಕ್ಕೆ  ಈ ಘಟನೆಯೇ ಸಾಕ್ಷಿ. ಕಾರಿಗೆ ಡಿಕ್ಕಿ ಹೊಡೆದ ನಾಯಿಯೊಂದು ಕಾರಿನ ಬಂಪರ್ ಒಳಗೆ ಸಿಕ್ಕಿ ಹಾಕಿಕೊಂಡು  ಕಾರು ಸುಮಾರು 70 ಕಿಲೋ ಮೀಟರ್ ಸಾಗಿದರೂ ನಾಯಿ ಬದುಕುಳಿದ ಘಟನೆ ಪುತ್ತೂರಿನಲ್ಲಿ ನಡೆದಿದೆ.


ಪುತ್ತೂರಿನ ಕಬಕ ನಿವಾಸಿ ಸುಬ್ರಹ್ಮಣ್ಯ ಟಿ.ಎಸ್ ಅವರ ಕಾರಿಗೆ ನಾಯಿ ಸುಬ್ರಹ್ಮಣ್ಯ-ಪುತ್ತೂರು ರಸ್ತೆಯ ಸುಬ್ರಮಣ್ಯ ಬಳಿಯ ಬಳ್ಪ ಎಂಬಲ್ಲಿ ಡಿಕ್ಕಿ ಹೊಡೆದಿತ್ತು. ಕೂಡಲೇ ಕೆಳಗೆ ಇಳಿದ ಸುಬ್ರಮಣ್ಯ ದಂಪತಿ ಕಾರನ್ನು ಪರಿಶೀಲಿಸಿದ್ದಾರೆ. ಆಗ ನಾಯಿ ನಾಪತ್ತೆಯಾಗಿತ್ತು. ನಾಯಿಗೆ ಏನೂ ಆಗಿಲ್ಲ  ಎಲ್ಲೋ ಓಡಿರಬೇಕು ಎಂದು ದಂಪತಿ ಕಾರು ಸ್ಟಾರ್ಟ್ ಮಾಡಿ ಪುತ್ತೂರಿಗೆ ಬಂದಿದ್ದಾರೆ.

ಆದರೆ ಮನೆಗೆ ಬಂದು ಸಿ ಕಾರನ್ನು ಪರಿಶೀಲಿಸಿದಾಗ ಅವರಿಗೆ ಶಾಕ್ ಕಾದಿತ್ತು. ಕಾರಿನ ಬಂಪರ್ ನ ಒಳಗೆ ನಾಯಿ ಸಿಕ್ಕಿ ಹಾಕಿಕೊಂಡಿತ್ತು, ಕೂಡಲೇ ಕಾರಿನ ಮೆಕ್ಯಾನಿಕ್ ನ್ನು ಕರೆಸಿ ಬಂಪರ್ ನ್ನು ತೆಗೆದಾಗ ನಾಯಿ ಅದರೊಳಗೆ ಸಿಲುಕಿಕೊಂಡಿತ್ತು. ಕಾರು 70 ಕಿಲೋ ಮೀಟರ್ ಕ್ರಮಿಸಿದರೂ ಕೂಡ ನಾಯಿಗೆ ಮಾತ್ರ ಸಣ್ಣ ಗಾಯ ಕೂಡ ಆಗಿಲ್ಲ, ಆಶ್ವರ್ಯಕರ ರೀತಿಯಲ್ಲಿ ನಾಯಿ ಪಾರಾಗಿತ್ತು. ಅದೃಷ್ಟ ಅಂದರೆ ಹೀಗಿರುತ್ತೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ,

- Advertisement -

Latest News

error: Content is protected !!