Sunday, November 29, 2026
Homeಕರಾವಳಿಮಂಗಳೂರುಮಂಗಳೂರು: ವ್ಯಾನ್, ಸ್ಕೂಟರ್ ಹಾಗೂ ರಿಕ್ಷಾ ನಡುವೆ ಸರಣಿ ಅಪಘಾತ; ವೃದ್ಧ ಸಾವು

ಮಂಗಳೂರು: ವ್ಯಾನ್, ಸ್ಕೂಟರ್ ಹಾಗೂ ರಿಕ್ಷಾ ನಡುವೆ ಸರಣಿ ಅಪಘಾತ; ವೃದ್ಧ ಸಾವು

- Advertisement -
- Advertisement -

ಮಂಗಳೂರು: ವ್ಯಾನ್ ಒಂದು ಸ್ಕೂಟರ್ ಹಾಗೂ ಆಟೋ ರಿಕ್ಷಾಕ್ಕೆ ಸರಣಿಯಾಗಿ ಢಿಕ್ಕಿ ಹೊಡೆದ ಪರಿಣಾಮ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ವೃದ್ಧರೊಬ್ಬರು ಮೃತಪಟ್ಟಿರುವ ದಾರುಣ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪನೀರ್ ಸಿಎಂ ವ್ಯಾಲಿ ಬಳಿ ನಡೆದಿದೆ. ಮೃತಪಟ್ಟವರನ್ನು ಅಡ್ಕರಪಡ್ಪು ನಿವಾಸಿ ಇಬ್ರಾಹಿಂ (61) ಎಂದು ಗುರುತಿಸಲಾಗಿದೆ.

ಘಟನೆಯ ವಿವರ: ಗುರುವಾರದಂದು ಮರ್ಜೂಕ್ ಎಂಬವರು ಚಲಾಯಿಸುತ್ತಿದ್ದ ಆಟೋ ರಿಕ್ಷಾದಲ್ಲಿ ಇಬ್ರಾಹಿಂ ಅವರು ನಾಟೆಕಲ್ ಕಡೆಯಿಂದ ಕೆ.ಸಿ. ರೋಡ್ ಕಡೆಗೆ ಪ್ರಯಾಣಿಸುತ್ತಿದ್ದರು. ಈ ವೇಳೆ ಪನೀರ್ ಸಿಎಂ ವ್ಯಾಲಿ ಸಮೀಪ ಕೆ.ಸಿ. ರೋಡ್ ಕಡೆಯಿಂದ ನಾಟೆಕಲ್‌ನತ್ತ ಬರುತ್ತಿದ್ದ ವ್ಯಾನ್, ಮೊದಲಿಗೆ ಸ್ಕೂಟರ್‌ಗೆ ಢಿಕ್ಕಿ ಹೊಡೆದಿದೆ. ಬಳಿಕ ನಿಯಂತ್ರಣ ತಪ್ಪಿ ಎದುರಿನಿಂದ ಬರುತ್ತಿದ್ದ ರಿಕ್ಷಾಕ್ಕೆ ಅಪ್ಪಳಿಸಿದೆ.

ಅಪಘಾತದ ತೀವ್ರತೆಗೆ ರಿಕ್ಷಾದಲ್ಲಿದ್ದ ಇಬ್ರಾಹಿಂ ಅವರು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.

ಇನ್ನು ಘಟನೆಯಲ್ಲಿ ರಿಕ್ಷಾ ಚಾಲಕ ಮರ್ಜೂಕ್, ವ್ಯಾನ್ ಚಾಲಕ ಮನೋಜ್ ಡಿ’ಸೋಜಾ ಹಾಗೂ ಸ್ಕೂಟರ್ ಸವಾರ ವಿನಯ ಕ್ರಾಸ್ತಾ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿರುವ ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!