Wednesday, May 15, 2024
Homeಕರಾವಳಿಉಡುಪಿ: ಸಮಾಜದಲ್ಲಿ ಲವ್ ಜಿಹಾದಿ, ಮತಾಂತರಗಳ ಸಂಖ್ಯೆ ಹೆಚ್ಚುತ್ತಿದೆ ಅಂದ್ರೆ ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು:...

ಉಡುಪಿ: ಸಮಾಜದಲ್ಲಿ ಲವ್ ಜಿಹಾದಿ, ಮತಾಂತರಗಳ ಸಂಖ್ಯೆ ಹೆಚ್ಚುತ್ತಿದೆ ಅಂದ್ರೆ ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು: ಬಿ.ಎಲ್.ಸಂತೋಷ್

spot_img
- Advertisement -
- Advertisement -

ಉಡುಪಿ: ಕೃಷ್ಣ ಮಠದ ರಾಜಾಂಗಣದಲ್ಲಿ ಅದಮಾರು ಮಠದ ಪರ್ಯಾಯ ಹಿನ್ನೆಲೆಯ ವಿಶ್ವಾರ್ಪಣದ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಮೊದಲ ಹಂತದಲ್ಲಿ ಕ್ರಿಶ್ಚಿಯನ್ನರಾಗಿ ಮತಾಂತರಗೊಂಡಿರುವ ಮಂದಿ ಹೆಚ್ಚು ಅಪಾಯಕಾರಿ ಎಂದು ಹೇಳಿದ್ದಾರೆ.

ಆಗಷ್ಟೇ ಮತಾಂತರಗೊಂಡ ಕ್ರಿಸ್ತಿಯನ್ನರು ನಮ್ಮ ಸುತ್ತಮುತ್ತ ಇದ್ದಾರೆ ಅಂದ್ರೆ, ನಮ್ಮ ಬಾಗಿಲಲ್ಲೇ ಅಪಾಯ ಇದೆಯೆಂದರ್ಥ ನಮ್ಮ ಪರಿಸರದಲ್ಲಿ ಅಂತಹ ಕುಟುಂಬಗಳು ವಾಸವಿದ್ದರೆ ಅವರ ಬಗ್ಗೆ ಹೆಚ್ಚು ನಿಗಾ ಇಡಬೇಕು, ರಾಜ್ಯದಲ್ಲಿ ಮತಾಂತರ ನಿಷೇಧ ಕಾಯ್ದೆ ಜಾರಿಗೆ ತರಲಾಗುತ್ತಿದೆ. ಈ ಬಗ್ಗೆ ಸಿಎಂ ಬೊಮ್ಮಾಯಿ ಕೂಡ ಭರವಸೆ ನೀಡಿದ್ದಾರೆ, ಆದರೆ ಕಾನೂನು ಬಂದ ಮಾತ್ರಕ್ಕೆ ಸಮಸ್ಯೆ ನಿವಾರಣೆ ಆಗುವುದಿಲ್ಲ ಎಂದು ತಿಳಿಸಿದ್ದಾರೆ.

ಸಮಾಜದ ಪ್ರತೀ ಹಂತದ ಜನರು ಕೂಡ ಈ ಕಾಯ್ದೆ ಬಗ್ಗೆ ಜಾಗೃತರಾಗಬೇಕು ಮತ್ತು ಮತಾಂತರ ವಿಚಾರದಲ್ಲಿ ಜಾಗೃತಿ ಹೊಂದಬೇಕು. ನಮ್ಮ ಹೆಣ್ಮಕ್ಕಳು ಲವ್ ಜಿಹಾದಿಗೆ ಬಲಿಯಾಗುತ್ತಿದ್ದಾರೆ. ಇಂಥ ಲವ್ ಜಿಹಾದಿ, ಮತಾಂತರಗಳ ಸಂಖ್ಯೆ ಸಮಾಜದಲ್ಲಿ ಹೆಚ್ಚುತ್ತಿದೆ ಅಂದ್ರೆ ಎಚ್ಚರಿಕೆ ಗಂಟೆ ಅಂತಲೇ ಪರಿಗಣಿಸಬೇಕು ಎಂದು ಸಂತೋಷ್ ಹೇಳಿದರು.

- Advertisement -
spot_img

Latest News

error: Content is protected !!