Tuesday, April 30, 2024
Homeತಾಜಾ ಸುದ್ದಿಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ಚಿಗುರಿದ ಪ್ರೀತಿ; ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾದ ಜೋಡಿ

ಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ಚಿಗುರಿದ ಪ್ರೀತಿ; ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾದ ಜೋಡಿ

spot_img
- Advertisement -
- Advertisement -

ಚೆನ್ನೈ; ಮಾನಸಿಕ ಅಸ್ವಸ್ಥ ಕೇಂದ್ರದಲ್ಲಿ ರೋಗಿಗಳಿಬ್ಬರ ಮಧ್ಯೆ ಪ್ರೀತಿ ಮೂಡಿ ಅವರಿಬ್ಬರು ಇದೀಗ ವೈವಾಹಿಕ ಜೀವನಕ್ಕೆ ಕಾಲಿಡಲು ಸಿದ್ಧವಾಗಿರುವ ಅಪರೂಪದ ಘಟನೆ ಚೆನ್ನೈನ ಕಿಲ್ಪಾಕ್ ಸರ್ಕಾರಿ ಆಸ್ಪತ್ರೆಯಲ್ಲಿ ನಡೆದಿದೆ.

ಚೆನ್ನೈನ ಕಿಲ್ಪಾಕ್ ಮಾನಸಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 42 ವರ್ಷದ ಮಹೇಂದ್ರನ್ ಮತ್ತು 36 ವರ್ಷದ ದೀಪಾ ಮಧ್ಯೆ ಪ್ರೀತಿ ಹುಟ್ಟಿದ್ದು, ಇಬ್ಬರು ವಿವಾಹವಾಗುವುದಾಗಿ ಹೇಳಿದ್ದಾರೆ.ಇವರಿಬ್ಬರೂ ತೀವ್ರ ಮಾನಸಿಕ ಅಸ್ವಸ್ಥತೆಯಿಂದ ಆಸ್ಪತ್ರೆಗೆ ಎರಡು ವರ್ಷಗಳ ಮೊದಲು‌ ದಾಖಲಾಗಿದ್ದರು. ಕೌಟುಂಬಿಕ ಕಲಹದಿಂದ ಮಹೇಂದ್ರನ್ ‘ಬೈಪೋಲಾರ್ ಅಫೆಕ್ಟಿವ್ ಡಿಸಾರ್ಡರ್’ನಿಂದ ಬಳಲುತ್ತಿದ್ದರು. ತಂದೆಯ ಸಾವಿನಿಂದ ದೀಪಾ ಖಿನ್ನತೆಗೆ ಒಳಗಾಗಿದ್ದರು.
ಈ ಕುರಿತು ಪ್ರತಿಕ್ರಿಯಿಸಿರುವ ಮಹೇಂದ್ರನ್ ಕುಟುಂಬದ ಆಸ್ತಿ ಸಮಸ್ಯೆಯಿಂದ ಮಾನಸಿಕ ಅಸ್ವಸ್ಥೆಯಿಂದ ಬಳಲುತ್ತಿದ್ದು, ಮೊದಲು ಚಿಕಿತ್ಸೆಗೆ ಆಸ್ಪತ್ರೆಗೆ ಬಂದಿದ್ದೆ.ಚಿಕಿತ್ಸೆ ಬಳಿಕ‌ ರಿಕವರಿ‌ ಆಗಿದ್ದು ಕಿಲ್ಪಾಕ್ ಮೆಂಟಲ್ ಅಸ್ಸಿಲಮ್​ನ ಡೇ ಕೇರ್ ಸೆಂಟರ್ ನಲ್ಲೆ ಕೆಲಸ ಮಾಡುತ್ತಿದ್ದೆ ಎಂದು ಹೇಳಿದ್ದಾರೆ. ದೀಪಾ ಅಲ್ಲಿಗೆ ಚಿಕಿತ್ಸೆಗಾಗಿ ಬಂದಿದ್ದರು.ನಾನು ಅವರನ್ನು ಚೆನ್ನಾಗಿ ನೋಡಿಕೊಂಡೆ.ನಮ್ಮ‌ ನಡುವೆ ಪ್ರೀತಿ ಮೂಡಿತು.  ಇದೀಗ ಮದುವೆಗೆ ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

ದೀಪಾ ತಾಯಿ ಮನಸ್ಸಿನವಳು,ನನ್ನ ತಾಯಿ ಶಿಕ್ಷಕಿ, ದೀಪಾ ಶಿಕ್ಷಕಿ.ನನ್ನ ಬದುಕಿನ ಸಂಬಂಧಗಳು ದೀಪಾಗೆ ಹೊಂದಿಕೊಳ್ಳುತ್ತಿದೆ.ಇದರಿಂದ ಒಂದಾಗಿ ಜೀವನ‌ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.

- Advertisement -
spot_img

Latest News

error: Content is protected !!