Thursday, May 2, 2024
Homeತಾಜಾ ಸುದ್ದಿಕಾಂತಾರ ಸಿನಿಮಾಗೆ ಕ್ಲೀನ್ ಬೋಲ್ಡ್ ಆದ ಸೂಪರ್ ಸ್ಟಾರ್; ರಿಷಭ್ ಶೆಟ್ಟಿಯನ್ನು ಮನೆಗೆ ಕರೆಸಿಕೊಂಡು ಸನ್ಮಾನಿಸಿದ...

ಕಾಂತಾರ ಸಿನಿಮಾಗೆ ಕ್ಲೀನ್ ಬೋಲ್ಡ್ ಆದ ಸೂಪರ್ ಸ್ಟಾರ್; ರಿಷಭ್ ಶೆಟ್ಟಿಯನ್ನು ಮನೆಗೆ ಕರೆಸಿಕೊಂಡು ಸನ್ಮಾನಿಸಿದ ರಜನಿಕಾಂತ್   

spot_img
- Advertisement -
- Advertisement -

ಬೆಂಗಳೂರು: ರಿಷಭ್ ಶೆಟ್ಟಿ ನಟನೆ ಹಾಗೂ ನಿರ್ದೇಶನದ ಕಾಂತಾರ ಸಿನಿಮಾ ವಿಶ್ವದಾದ್ಯಂತ ಸದ್ದು ಮಾಡುತ್ತಿದೆ. ದೊಡ್ಡ ದೊಡ್ಡ ಸ್ಟಾರ್ ಗಳೇ ಸಿನಿಮಾಗೆ ಫಿದಾ ಆಗಿದ್ದಾರೆ. ಹೀಗಿರುವಾಗಲೇ ಸಿನಿಮಾ ನೋಡಿದ ನಟ ರಜನಿಕಾಂತ್ ಅವರು ರಿಷಭ್ ಅವರಿಗೆ ಕರೆ ಮಾಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ದೊಡ್ಡ ಸಪ್ರೈಸ್ ಒಂದನ್ನು ಸೂಪರ್ ಸ್ಟಾರ್ ನೀಡಿದ್ದಾರೆ.

ಸ್ವತಃ ರಿಷಭ್ ಅವರನ್ನು ತಮ್ಮ ಮನೆಗೆ ಕರೆದು ಸನ್ಮಾನ ಮಾಡಿದ್ದಾರೆ.ರಜನಿಕಾಂತ್ ಮನೆಗೆ ಭೇಟಿ ನೀಡಿದ ವೇಳೆ ಕೆಲ ಹೊತ್ತು ರಜನಿಕಾಂತ್ ಅವರ ಜೊತೆ ಮಾತನಾಡಿ ತಮ್ಮ ಕನಸುಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕೃತಜ್ಞತೆಯನ್ನೂ ಹೇಳಿದ್ದಾರೆ. ಕಾಂತಾರ ಮೇಕಿಂಗ್, ಅದನ್ನು ಹೇಳಿದ ರೀತಿ, ತೋರಿಸಿದ ಕ್ರಮದ ಬಗ್ಗೆ ರಜನಿಕಾಂತ್ ಮೆಚ್ಚುಗೆಯನ್ನು ಈ ಸಂದರ್ಭದಲ್ಲಿ ವ್ಯಕ್ತ ಪಡಿಸಿದ್ದಾರೆ. ರಜನಿ ಮಾತು ಕೇಳಿ ರಿಷಭ್ ಫುಲ್  ಖುಶಿಯಾಗಿದ್ದಾರೆ.

ಸಿನಿಮಾ, ಮೇಕಿಂಗ್, ಕಥೆ, ನಟನೆ, ಸಂಗೀತ ಸೇರಿದಂತೆ ಹಲವು ವಿಚಾರಗಳನ್ನು ರಜನಿ ಮುಕ್ತವಾಗಿ ರಿಷಭ್ ಜೊತೆ ಮಾತನಾಡಿದ್ದಾರೆ. ಎಲ್ಲಾ ವಿಭಾಗದ ಕೆಲಸವನ್ನೂ ರಜನಿ ಮೆಚ್ಚಿಕೊಂಡಿದ್ದಾರೆ.ಇನ್ನು ಈ ಸಂಭ್ರಮವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಿಷಭ್ ನೀವು ಒಂದ್ ಸಲ ಹೊಗಳಿದ್ರೆ.. ನೂರು ಸಲ ಹೊಗಳ್ದ೦ಗೆ ನಮಗೆ. ಧನ್ಯವಾದಗಳು Rajinikanth  sir ನಮ್ಮ ಕಾಂತಾರ ಚಿತ್ರ ನೋಡಿ ನೀವು ಮೆಚ್ಚಿದಕ್ಕೆ ನಾವು ಸದಾ ಆಭಾರಿ ಎಂದಿದ್ದಾರೆ.

- Advertisement -
spot_img

Latest News

error: Content is protected !!