Sunday, June 7, 2026
Homeಕರಾವಳಿಉಡುಪಿಕಾರ್ಕಳದಲ್ಲಿ ಲಾರಿ ಚಾಲಕರ ಮಧ್ಯೆ ಗಲಾಟೆ; ಓರ್ವ ಲಾರಿ ಡ್ರೈವರ್ ಸಾವು

ಕಾರ್ಕಳದಲ್ಲಿ ಲಾರಿ ಚಾಲಕರ ಮಧ್ಯೆ ಗಲಾಟೆ; ಓರ್ವ ಲಾರಿ ಡ್ರೈವರ್ ಸಾವು

- Advertisement -
- Advertisement -

ಕಾರ್ಕಳ; ಲಾರಿ ಡ್ರೈವರ್ ಗಳ ನಡುವಿನ ಜಗಳ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.ತಮಿಳುನಾಡಿನ ಲಾರಿ ಚಾಲಕ ಚಾಲಕ ಮಣಿ (36) ಎಂಬಾತನನ್ನು ಇನ್ನೋರ್ವ ಲಾರಿ ಚಾಲಕ ವೀರಬಾಹು ಕೊಲೆಗೈದಿದ್ದಾನೆ.

ಮುಡಾರು ಗ್ರಾಮದ ಮುಡ್ರಾಲು ಎಂಬಲ್ಲಿರುವ ಶ್ರೀದೇವಿ ಕ್ಯಾಶ್ಯೂ ಫ್ಯಾಕ್ಟರಿಗೆ ಪ್ರತಿವರ್ಷ ತಮಿಳುನಾಡಿನಿಂದ ಗೇರು ಬೀಜ ಲೋಡ್ ಬರುತ್ತಿದ್ದು ಅದರಲ್ಲಿ‌ ಬಂದವರು ಲಾರಿಯಲ್ಲಿ ಅನ್‌ಲೋಡ್ ಮಾಡಿ ಹೋಗುತ್ತಿದ್ದರು. ತಮಿಳುನಾಡಿನಿಂದ ಬಂದ ಎರಡು ಲಾರಿಗಳ ಸರಕು ಅನ್ ಲೋಡ್ ಆಗದ ಕಾರಣ ಲಾರಿಗಳು ಫ್ಯಾಕ್ಟರಿ ಬಳಿಯೇ ನಿಂತಿತ್ತು. ಈ ನಡುವೆ ರಾತ್ರಿ 8:30ರ ಸುಮಾರಿಗೆ ಲಾರಿ ಚಾಲಕರಾದ ವೀರಬಾಹು ಹಾಗೂ ಮಣಿ ನಡುವೆ ಮಾತಿನ ಚಕಮಕಿ ನಡೆದು ಗಲಾಟೆ ಹಂತಕ್ಕೆ ಹೋಗಿದೆ. ಕೂಡಲೇ ಚಾಲಕ ವೀರಬಾಹು, ಮಣಿಯ ಕುತ್ತಿಗೆಗೆ ಶಾಲ್ ನಿಂದ ಬಿಗಿದು ಆಯುಧದಿಂದ ಇರಿದು ಗಾಯಗೊಳಿಸಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.

 ಕೊಲೆಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!