Friday, June 5, 2026
Homeಕರಾವಳಿಉಡುಪಿಕುಂದಾಪುರ: ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ: ಬೈಕ್‌ ಹಿಂಬದಿ ಸವಾರ ಸಾವು

ಕುಂದಾಪುರ: ಬೈಕ್‌ಗೆ ಡಿಕ್ಕಿ ಹೊಡೆದ ಲಾರಿ: ಬೈಕ್‌ ಹಿಂಬದಿ ಸವಾರ ಸಾವು

- Advertisement -
- Advertisement -

ಕುಂದಾಪುರ: ಗ್ಯಾಸ್‌ ಸಿಲಿಂಡರ್‌ ಸಾಗಿಸುತ್ತಿದ್ದ ಲಾರಿ ಬೈಕ್‌ ಗೆ ಡಿಕ್ಕಿ ಹೊಡೆದು ಐಟಿಐ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಕುಂದಾಪುರ ತಾಲೂಕಿನ ಹೊಸಂಗಡಿ ಕೆರೆಕಟ್ಟೆ ಬಳಿ ನಡೆದಿದೆ.

ಬೈಕ್‌ ಹಿಂಬದಿ ಸವಾರ, ಗಂಗನಾಡು ಕ್ಯಾತ್ತೂರು ನಿವಾಸಿ ಸೃಜನ್ ನಾಗರಾಜ ಮರಾಠಿ ಮೃತಪಟ್ಟವರು. ಬೈಕ್‌ ಸವಾರ ದಿವಾಕರ ನಾಯ್ಕ (19) ಗಾಯಗಳೊಂದಿಗೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸೃಜನ್ ಗಂಗನಾಡಿಂದ ಹೊಸಂಗಡಿ ಅಜ್ಜಿ ಮನೆಗೆ ಬಂದಿದ್ದು, ಸಂಬಂಧಿ ದಿನಕರ ಜೊತೆ ಬೈಕಲ್ಲಿ ತೆರಳುತ್ತಿರುವಾಗ ಲಾರಿ ಬೈಕಿಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಅಮಾಸೆಬೈಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!