Sunday, May 19, 2024
Homeಕರಾವಳಿಉಡುಪಿಉಡುಪಿಯಲ್ಲಿ ನಾಪತ್ತೆಯಾದ ಬಾಲಕಿಯ ಪತ್ತೆಗೆ ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ

ಉಡುಪಿಯಲ್ಲಿ ನಾಪತ್ತೆಯಾದ ಬಾಲಕಿಯ ಪತ್ತೆಗೆ ಪೊಲೀಸರಿಂದ ಲುಕ್ ಔಟ್ ನೋಟಿಸ್ ಜಾರಿ

spot_img
- Advertisement -
- Advertisement -

ಉಡುಪಿ: ಕಳೆದ ಮೂರು ತಿಂಗಳಿನಿಂದ ನಾಪತ್ತೆಯಾಗಿರುವ ಪೆರಂಪಳ್ಳಿಯ ಅವೀನಾ(16) ಎಂಬಾಕೆಯ ಪತ್ತೆಗಾಗಿ ಮಣಿಪಾಲ ಪೊಲೀಸರು ಲುಕ್‌ಔಟ್ ನೋಟೀಸ್ ಜಾರಿಗೊಳಿಸಿದ್ದಾರೆ.

ಈಕೆ ಎ.13ರಂದು ತನ್ನ ತಾಯಿಯೊಂದಿಗೆ ಮೊಬೈಲ್ ವಿಚಾರಕ್ಕೆ ಜಗಳ ಮಾಡಿ, ಅದೇ ದಿನ ರಾತ್ರಿ ಮನೆಯಿಂದ ಹೋದವಳು ನಾಪತ್ತೆಯಾಗಿದ್ದಳು. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಒಂಭತ್ತನೆ ತರಗತಿ ಓದಿರುವ ಈಕೆ, ಕನ್ನಡ ಭಾಷೆ ಮಾತನಾಡುತ್ತಾಳೆ. 4.5 ಅಡಿ ಎತ್ತರ, ಎಣ್ಣೆ ಕಪ್ಪು ಮೈಬಣ್ಣ ಹೊಂದಿದ್ದಾಳೆ.

ಈಕೆಗೆ ಬಗ್ಗೆ ಮಾಹಿತಿ ದೊರೆತರೆ ಮಣಿಪಾಲ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ- 0820- 2570328ಗೆ ಮಾಹಿತಿ ನೀಡುವಂತೆ ಪೊಲೀಸ್ ಪ್ರಕಟಣೆ ತಿಳಿಸಿದೆ.

- Advertisement -
spot_img

Latest News

error: Content is protected !!