- Advertisement -
![]()
- Advertisement -
ಬೆಳಗಾವಿ: ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ದೂದ್‌ಸಾಗರ್ ಬಳಿ ರೈಲ್ವೇ ಹಳಿ ಮೇಲೆ ಗುಡ್ಡ ಕುಸಿತ ಸಂಭವಿಸಿದೆ. ಇದರಿಂದಾಗಿ ಮಂಗಳೂರು – ಮುಂಬೈ ಎಕ್ಸ್‌ಪ್ರೆಸ್ ರೈಲು ಹಳಿ ತಪ್ಪಿದೆ.

ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಿಲ್ಲದೇ, ಭಾರೀ ಅನಾಹುತವೊಂದು ತಪ್ಪಿ ಹೋಗಿದೆ. ಬದಲಾಯಿಸಲ್ಪಟ್ಟಿದ್ದ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮಂಗಳೂರು – ಮುಂಬೈ ರೈಲು ಬೆಳಗ್ಗೆ ದೂದ್ ಸಾಗರ್ – ಸೋನಾಲೆಂ ಮಧ್ಯೆ ಹಳಿ ತಪ್ಪಿದೆ.
ಭೂ ಕುಸಿತ ಕಾರಾಣದಿಂದಾಗಿ ರೈಲಿನ ಎಂಜಿನ್ ಮತ್ತು ಒಂದು ಬೋಗಿ ಹಳಿ ತಪ್ಪಿದೆ. ಪ್ರಯಾಣಿಕರನ್ನು ರಕ್ಷಿಸಿದ ರೈಲ್ವೇ ಸಿಬ್ಬಂದಿ ಮರಳಿ ಅದೇ ರೈಲಿನಲ್ಲಿ ಗೋವಾದ ಮಡಗಾಂವ್‌ಗೆ ವಾಪಸ್ ಕಳುಹಿಸಿದ್ದಾರೆ.
- Advertisement -


