Wednesday, December 7, 2022
Homeತಾಜಾ ಸುದ್ದಿಕೊರೊನಾ ತಡೆಗೆ ರಾಹುಲ್ ಗಾಂಧಿ ನೀಡಿದ್ದಾರೆ ಅಮೂಲ್ಯ ಸಲಹೆ

ಕೊರೊನಾ ತಡೆಗೆ ರಾಹುಲ್ ಗಾಂಧಿ ನೀಡಿದ್ದಾರೆ ಅಮೂಲ್ಯ ಸಲಹೆ

- Advertisement -
- Advertisement -

ಕೊರೊನಾ ವೈರಸ್ ತಡೆಗೆ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಮೋದಿ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ. ಎರಡು ರೀತಿಯಲ್ಲಿ ಕೊರೊನಾ ಹೊಡೆದೋಡಿಸಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ಒಂದು ಆರ್ಥಿಕ ಮಟ್ಟದ ಅಭಿವೃದ್ಧಿಯಾದ್ರೆ ಇನ್ನೊಂದು ವೈದ್ಯಕೀಯ ಕ್ಷೇತ್ರದ್ದಾಗಿದೆ.

ಕೊರೊನಾ ಹೊಡೆದೋಡಿಸಲು ಕೇರಳ-ವಯನಾಡ್ ಮಾದರಿ ಅಳವಡಿಸಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಕೊರೊನಾ ವಿರುದ್ಧ ನಿಜವಾದ ಹೋರಾಟ ನಡೆಸುತ್ತಿದೆ. ಕೇಂದ್ರ ಸರ್ಕಾರ, ರಾಜ್ಯ ಹಾಗೂ ಜಿಲ್ಲಾಡಳಿತಕ್ಕೆ ಸಹಾಯ ಮಾಡಬೇಕೆಂದು ರಾಹುಲ್ ಗಾಂಧಿ ಹೇಳಿದ್ದಾರೆ. ವಯನಾಡ್ ಸೇರಿದಂತೆ ಇಡೀ ಕೇರಳದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಬಂದಿದೆ ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.

ಧಾನ್ಯಗಳ ಬಿಕ್ಕಟ್ಟು ಬಗೆಹರಿಸುವುದು, ನಿರುದ್ಯೋಗ ಸಮಸ್ಯೆಗೆ ಪರಿಹಾರ ನೀಡಲು ಮೋದಿ ಸರ್ಕಾರ ಸಿದ್ಧವಿರಬೇಕು. ಸೂಕ್ಷ್ಮ-ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಪ್ಯಾಕೇಜ್ ವ್ಯವಸ್ಥೆ ಮಾಡಬೇಕು. ದೊಡ್ಡ ಕಂಪನಿಗಳು ಸಹ ಸಹಾಯ ಮಾಡಬೇಕು ಎಂದಿದ್ದಾರೆ. ಲಾಕ್ ಡೌನ್ ನಿಂದ ಕೊರೊನಾ ನಾಶ ಸಾಧ್ಯವಿಲ್ಲ. ಲಾಕ್ ಡೌನ್ ತೆರೆದ ನಂತ್ರ ಮತ್ತೆ ಕೊರೊನಾ ಸೋಂಕು ಹೆಚ್ಚಾಗುತ್ತದೆ. ಹಾಗಾಗಿ ಮಾದರಿ ಪರೀಕ್ಷೆ ಹೆಚ್ಚಾಗಬೇಕು ವೈದ್ಯಕೀಯ ಸೌಲಭ್ಯಗಳನ್ನು ಹೆಚ್ಚಿಸಬೇಕು ಎಂದಿದ್ದಾರೆ.

- Advertisement -
spot_img

Latest News

error: Content is protected !!