Wednesday, May 15, 2024
Homeಕರಾವಳಿಮಂಗಳೂರು ಮೂಲದ ದಿವಿತಾ ರೈಗೆ ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್-2022 ಕಿರೀಟ

ಮಂಗಳೂರು ಮೂಲದ ದಿವಿತಾ ರೈಗೆ ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್-2022 ಕಿರೀಟ

spot_img
- Advertisement -
- Advertisement -

ಮುಂಬೈ: ಮಂಗಳೂರು ಮೂಲದ ದಿವಿತಾ ರೈ ಪ್ರತಿಷ್ಠಿತ ಲಿವಾ ಮಿಸ್ ದಿವಾ ಯುನಿಸವರ್ಸ್-2022 ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. 23 ವರ್ಷದ ಸೌಂದರ್ಯ ಮಿಸ್ ಯುನಿವರ್ಸ್ 2022 ಸೌಂದರ್ಯ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.

ಮುಂಬೈನಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ 2021ರ ಮಿಸ್ ಯುನಿವರ್ಸ್ ಹರ್ನಾಝ್ ಸಂಧು ಅವರು ಲಿವಾ ಮಿಸ್ ದಿವಾ 2022 ಪ್ರಶಸ್ತಿ ಕಿರೀಟ ತೊಡಿಸಿದರು.ತೆಲಂಗಾಣದ ಪ್ರಜ್ಞಾ ಅಯ್ಯಂಗಾರಿಯವರು ಲಿವಾ ಮಿಸ್ ದಿವಾ ಸುಪ್ರಾನ್ಯಾಷನಲ್-2022 ಗೌರವಕ್ಕೆ ಪಾತ್ರರಾದರು. ಮಿಸ್ ಸುಪ್ರಾನ್ಯಾಷನಲ್ ಏಷ್ಯಾ 2022 ರಿತಿಕಾ ಖತ್ನಾನಿಯವರು ಪ್ರಜ್ಞಾ ಅವರಿಗೆ ಕಿರೀಟ ತೊಡಿಸಿದರು.

ಮಂಗಳೂರಿನಲ್ಲಿ ಜನಿಸಿದ ದಿವಿತಾ ರೈ ಅವರ ತಂದೆ ದಿಲೀಪ್ ರೈ ಹಾಗೂ ತಾಯಿ ಪವಿತ್ರಾ ರೈ. ತಂದೆಯ ಉದ್ಯೋಗದ ಕಾರಣದಿಂದಾಗಿ ದಿವಿತಾ ಬೇರೆ ಬೇರೆ ಸ್ಥಳಗಳಲ್ಲಿ ಬೆಳೆದಿದ್ದರು. ಮುಂಬೈನಲ್ಲಿ ನೆಲೆಸಿರುವ ಅವರು ಜೆ.ಜೆ.ಕಾಲೇಜ್ ಆಫ್ ಆರ್ಕಿಟೆಕ್ಚ‌ರ್‌ ನಲ್ಲಿ ಪದವಿ ಪಡೆದಿದ್ದಾರೆ. ಇವರ ಅಣ್ಣ ದೈವಿಕ್ ರೈ ಕ್ರಿಕೆಟಿಗ. ಭಾರತದ ಒಳಾಂಗಣ ಕ್ರಿಕೆಟ್ ತಂಡದ ಸದಸ್ಯರಾಗಿರುವ ಇವರು 2017ರ ಒಳಾಂಗಣ ಕ್ರಿಕೆಟ್ ವಿಶ್ವಕಪ್ ಜಯಿಸಿದ ಭಾರತ ತಂಡದಲ್ಲಿದ್ದರು.

- Advertisement -
spot_img

Latest News

error: Content is protected !!