Thursday, April 25, 2024
Homeಇತರಇಂದಿನಿಂದ ದೇಶದ ಹಲವು ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

ಇಂದಿನಿಂದ ದೇಶದ ಹಲವು ರಾಜ್ಯಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ

spot_img
- Advertisement -
- Advertisement -

ದೇಶಾದ್ಯಂತ ಲಾಕ್ ಡೌನ್ ಅವಧಿ ವಿಸ್ತರಣೆಯಾಗುವ ಸಾಧ್ಯತೆ ಇದೆ. ಈ ನಡುವೆ ಅಸ್ಸಾಂ ಮತ್ತು ಮೇಘಾಲಯದ ಅಬಕಾರಿ ಇಲಾಖೆಗಳು ಇಂದಿನಿಂದ ಮದ್ಯ ಮಾರಾಟಕ್ಕೆ ಅವಕಾಶ ನೀಡಿವೆ.

ಅಸ್ಸಾಂನಲ್ಲಿ ಮದ್ಯ ಮಾರಾಟ ಅಂಗಡಿಗಳು, ಸಗಟು ಮಾರಾಟ ಕೇಂದ್ರಗಳು, ಮದ್ಯ ತಯಾರಿಕಾ ಘಟಕಗಳು ಹಾಗೂ ಬಾಟಲಿಂಗ್ ಘಟಕಗಳು ಇಂದಿನಿಂದ ನಿತ್ಯ 7 ಗಂಟೆ ತೆರೆಯಲು ಸರ್ಕಾರ ಅವಕಾಶ ಕಲ್ಪಿಸಿದೆ.

ಇನ್ನು ಮೇಘಾಲಯದಲ್ಲಿ ಬೆಳಗ್ಗೆ 9 ರಿಂದ ಸಂಜೆ 4 ರವರೆಗೆ ರಿಟೇಲ್ ಮದ್ಯ ಮಾರಾಟ ಕೇಂದ್ರಗಳು, ಅಂಗಡಿಗಳು ಹಾಗೂ ಸಂಗ್ರಹ ಘಟಕಗಳು ಕಾರ್ಯನಿರ್ವಹಿಸಲಿವೆ. ಸಾಮಾಜಿಕ ಅಂತರ ಕಾಪಾಡಿಕೊಳ್ಳುವಂತೆ ಅಧಿಕಾರಿಗಳು ಸೂಚಿಸಿದ್ದಾರೆ.

ಇನ್ನು ಕರ್ನಾಟಕದಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿಯನ್ನು ತೆರೆಯಲು ಸಿದ್ಧತೆ ಮಾಡಿಕೊಂಡಿದೆ. ಈ ಕುರಿತಂತೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರಿಗೆ ರಾಜ್ಯ ಅಬಕಾರಿ ಇಲಾಖೆ ಪ್ರಸ್ತಾವನೆಯನ್ನು ಸಲ್ಲಿಸಿದೆ. ಏಪ್ರಿಲ್ 15ರಿಂದ ರಾಜ್ಯದಲ್ಲಿನ ಎಂಎಸ್‌ಐಎಲ್ ಅಂಗಡಿಗಳನ್ನು ಒಪನ್ ಮಾಡುವ ಮೂಲಕ, ಮದ್ಯ ವಿತರಿಸಲು ಅನುಕೂಲ ಮಾಡಿಕೊಡುವಂತ ಪ್ರಸ್ತಾವನೆಯನ್ನು ಸರ್ಕಾರದ ಮುಂದೆ ಇಟ್ಟಿದೆ. ಈ ಪ್ರಸ್ತಾವನೆಗೆ ಸಿಎಂ ಒಕೆ ಅಂದ್ರೇ ಏಪ್ರಿಲ್ 15ರಿಂದ ರಾಜ್ಯದಲ್ಲಿ ಎಂಎಸ್‌ಐಎಲ್ ಮದ್ಯದ ಅಂಗಡಿ ಒಪನ್ ಆಗಲಿದೆ.

- Advertisement -
spot_img

Latest News

error: Content is protected !!