ಕೊರೊನಾ ವೈರಸ್ ಸೋಂಕಿನ ನಿಯಂತ್ರಣಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಘೋಷಣೆ ಮಾಡಲಾಗಿದೆ. ಈ ಸಂದರ್ಭದಲ್ಲಿ ರಾಜ್ಯದ ರೈತರು ಕೃಷಿ ಚಟುವಟಿಕೆ ನಡೆಸಲು ಹೊಡೆತ ಬಿದ್ದಿದೆ. ಇಂತಹ ಚಟುವಟಿಕೆ ನಡೆಸಲು, ಹೊಲಕ್ಕೆ ಹೋಗಲು ಯಾವುದೇ ಪಾಸ್ ಬೇಕಿಲ್ಲ ಎಂಬುದಾಗಿ ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಸ್ಪಷ್ಟ ಪಡಿಸಿದ್ದಾರೆ.
ಈ ಕುರಿತಂತೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಸಹಕಾರ ಸಚಿವ ಎಸ್ ಟಿ ಸೋಮಶೇಖರ್, ಲಾಕ್ ಡೌನ್ ನಿಂದ ಕೃಷಿ ಕಾರ್ಯಕ್ಕೆ ಯಾವುದೇ ಅಡ್ಡಿ ಇಲ್ಲ. ಸುರಕ್ಷತಾ ಕ್ರಮಗಳನ್ನು ಅನುಸರಿಸಿಕೊಂಡು, ರೈತರು ಹೊಲಗಳಲ್ಲಿ, ತೋಟಗಳಲ್ಲಿ ಕಾಯಕವನ್ನು ಮುಂದುವರೆಸಬಹುದು ಎಂದು ತಿಳಿಸಿದರು.
ಇನ್ನೂ ಅನೇಕರ ರಾಜ್ಯದ ರೈತರು ಹೊರಕ್ಕೆ ಹೋಗೋಕೂ ಪಾಸ್ ಪಡೆಯಬೇಕಾ ಎಂಬ ಗೊಂದಲದಲ್ಲಿ ಇದ್ದಾರೆ. ಆದ್ರೇ ಹೊಲಗಳಿಗೆ ಅಥವಾ ತೋಟಗಳಿಗೆ ಹೋಗುವುದಕ್ಕೆ ಯಾವುದೇ ಪಾಸ್ ನ ಅಗತ್ಯವೂ ಇಲ್ಲ. ಈ ಬಗ್ಗೆ ಆತಂಕಗಳಿದ್ದರೇ ಕೃಷಿ ಇಲಾಖೆ ಅಥವಾ ಹಾಪ್ ಕಾಮ್ಸ್ ವತಿಯಿಂದ ನೀಡುವ ಹಸಿರು ಪಾಸ್ ಪಡೆದು, ಕೆಲಸದಲ್ಲಿ ತೊಡಗಿಸಿಕೊಳ್ಳಬಹುದು ಎಂಬುದಾಗಿ ತಿಳಿಸಿದ್ದಾರೆ.