ಬೆಂಗಳೂರು: ಜಯಕರ್ನಾಟಕ ಸಂಘಟನೆ ರಾಜ್ಯಾಧ್ಯಕ್ಷ ಮಾತು ಮಾಜಿ ಭೂಗತ ದೊರೆ ಮುತ್ತಪ್ಪ ರೈ ಕಾನ್ಸರ್ ಎಂಬ ಮಹಾಮಾರಿಗೆ ತುತ್ತಾಗಿ ಇಂದು ನಿಧನರಾಗಿದ್ದಾರೆ ಎಂಬ ಸುದ್ದಿ ಇಂದು ಬೆಳಗ್ಗಿನಿಂದ ವಾಟ್ಸಾಪ್ ನಲ್ಲಿ ಹರಿದಾಡುತ್ತಿದೆ. ಆದರೆ ಇದರ ಈ ಸುದ್ದಿ ಬಗ್ಗೆ ಸ್ವತಃ ಮುತ್ತಪ್ಪ ರೈ ಸ್ಪಷ್ಟನೆ ನೀಡಿದ್ದಾರೆ..
ನಾನು ಸಾವನ್ನಪ್ಪಿಲ್ಲ. ಮತ್ತು ಹರಿದಾಡುತ್ತಿರುವ ಸುದ್ದಿ ಶುದ್ಧ ಸುಳ್ಳು. ನನ್ನ ಅಭಿಮಾನಿಗಳು ಮತ್ತು ಹಿತೈಷಿಗಳು ಇದರಿಂದ ಭಯಪಡುವ ಅವಶ್ಯಕತೆ ಇಲ್ಲ. ನಾನು ನನ್ನ ಬಿಡದಿಯ ಮನೆಯಲ್ಲಿ ಕ್ಷೆಮವಾಗಿದ್ದೇನೆ ಎಂದು ಖಾಸಗಿ ಮಾಧ್ಯಮವೊಂದಕ್ಕೆ ಸ್ಪಷ್ಟನೆ ನೀಡಿದ್ದಾರೆ.
ಮಾಜಿ ಡಾನ್ ಮುತ್ತಪ್ಪ ರೈ, ಪ್ರಸ್ತುತ ಜೈ ಕರ್ನಾಟಕ ಸಂಘಟನೆಯ ರಾಜ್ಯಾಧ್ಯಕ್ಷರಾಗಿ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ‘ಸಮಾಜ ಸೇವಕ ರಾಗಿ’ ಕಾಣಿಸಿಕೊಳ್ಳುತ್ತಿದ್ದರು. ಮುತ್ತಪ್ಪ ರೈ ಅವರು ರಿಯಲ್ ಎಸ್ಟೇಟ್ ಉದ್ಯಮಪತಿಗಳೂ ಆಗಿದ್ದರು.
ಮುತ್ತಪ್ಪ ರೈ ಮೆದುಳು ಕ್ಯಾನ್ಸರ್ ನಿಂದ ಬಳಲುತ್ತಿದ್ದು,. ಕ್ರಿಕೆಟಿಗ ಯುವರಾಜ್ ಸಿಂಗ್‌ಗೆ ಚಿಕಿತ್ಸೆ ನೀಡಿದ್ದ ದೆಹಲಿಯ ವೈದ್ಯ ನಿತೇಶ್ ರೋಹಟಗಿ ಅವರಿಂದ ಮುತ್ತಪ್ಪ ರೈ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.