ಮಂಗಳೂರು: ಇಟಲಿಯಿಂದ ಬಂದ ಯುವತಿಯನ್ನು ಸ್ವಂತ ಕಾರ್ ನಲ್ಲಿ ಮನೆಗೆ ತಲುಪಿಸಿ ಮಾಜಿ ಸಚಿವ ಯು.ಟಿ. ಖಾದರ್ ಮಾನವೀಯತೆ ಮೆರೆದಿದ್ದಾರೆ.
ಇಟಲಿಯಿಂದ ದೆಹಲಿ ಮೂಲಕ ಬೆಂಗಳೂರಿಗೆ ಆಗಮಿಸಿದ್ದ ವಿದ್ಯಾರ್ಥಿನಿ ಮಂಗಳೂರಿಗೆ ಬರಲು ಸಾಧ್ಯವಾಗಿರಲಿಲ್ಲ. ಇದನ್ನು ತಿಳಿದ ಯು.ಟಿ. ಖಾದರ್ ಕಾರ್ ನಲ್ಲಿ ಆಕೆಯನ್ನು ಮನೆಗೆ ತಲುಪಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಮಾರ್ಚ್ 22 ರಂದು ದೆಹಲಿಗೆ ಬಂದ ಯುವತಿ ವಿಮಾನ ನಿಲ್ದಾಣದಲ್ಲಿ ತಪಾಸಣೆಗೆ ಒಳಗಾಗಿ ಕ್ವಾರಂಟೈನ್ ನಲ್ಲಿದ್ದರು. ಕ್ವಾರಂಟೈನ್ ಅವಧಿ ಮುಗಿದ ನಂತರ ಬೆಂಗಳೂರಿಗೆ ವಿಶೇಷ ಬಸ್ ನಲ್ಲಿ ಬಂದಿದ್ದರು. ಲಾಕ್ ಡೌನ್ ಇದ್ದ ಕಾರಣ ಮನೆ ತಲುಪಲು ಹಲವು ಇಲಾಖೆಗಳಿಗೆ ಮನವಿ ಮಾಡಿದರೂ ಸ್ಪಂದನೆ ಸಿಕ್ಕಿರಲಿಲ್ಲ.
ಈ ವಿಷಯ ತಿಳಿದ ಮಂಗಳೂರಿನ ವಕೀಲ ಅರುಣ್ ಬಂಗೇರಾ ಅವರು ಮಾಜಿ ಸಚಿವ ಯು.ಟಿ. ಖಾದರ್ ಗೆ ವಿಷಯ ತಿಳಿಸಿದ್ದಾರೆ. ವಿದ್ಯಾರ್ಥಿನಿ ವಿಳಾಸ ಹುಡುಕಿ ತಮ್ಮ ಕಾರ್ ನಲ್ಲೇ ಮಂಗಳೂರಿನ ಕುಳಾಯಿಯ ಮನೆಗೆ ಆಕೆಯನ್ನು ತಲುಪಿಸಿದ ಯು.ಟಿ. ಖಾದರ್ ಮಾನವೀಯತೆ ಮೆರೆದಿದ್ದಾರೆ.