Friday, June 5, 2026
Homeಕರಾವಳಿಉಡುಪಿಉಡುಪಿ: ಶಾಸಕ ರಘುಪತಿ ಭಟ್‌‌ಗೆ ಇಂಟರ್ನೆಟ್ ಕಾಲ್ ಮೂಲಕ ಜೀವ ಬೆದರಿಕೆ

ಉಡುಪಿ: ಶಾಸಕ ರಘುಪತಿ ಭಟ್‌‌ಗೆ ಇಂಟರ್ನೆಟ್ ಕಾಲ್ ಮೂಲಕ ಜೀವ ಬೆದರಿಕೆ

- Advertisement -
- Advertisement -

ಉಡುಪಿ: ವಿದೇಶಗಳಿಂದ ಹಾಗೂ ಸ್ಥಳೀಯ ಕೆಲ ನಂಬರ್‌ಗಳಿಂದ ನಿರಂತರವಾಗಿ ಇಂಟರ್ನೆಟ್ ಕಾಲ್ ಮಾಡಿ ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಶಾಸಕ ರಘುಪತಿ ಭಟ್ ಹೇಳಿದ್ದಾರೆ.

ಈ ಕುರಿತು ಗೃಹಸಚಿವರಿಗೆ ಮೌಖಿಕವಾಗಿ ಮಾಹಿತಿ ನೀಡಿರುವ ರಘುಪತಿ ಭಟ್, ನಿನ್ನನ್ನು ನಾವು ನೋಡಿಕೊಳ್ಳುತ್ತೇವೆ. ಮುಸಲ್ಮಾನರ ವಿರುದ್ಧ ನೀನು ಮೆರೆದಾಡ ಬೇಡ. ನಿನ್ನನ್ನು ಹೇಗೆ ನಿಯಂತ್ರಿಸಬೇಕು ಗೊತ್ತಿದೆ ಎಂದು ವಿದೇಶ ಸ್ಥಳೀಯ ಕೆಲ ನಂಬರ್ ಗಳಿಂದ ನಿರಂತರ ಫೋನ್ ಕರೆ ಮಾಡಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಇನ್ನು ಇಂತಹ ಹಲವು ಬೆದರಿಕೆಗಳನ್ನು ನಾವು ತುಂಬಾ ನೋಡಿದ್ದೇವೆ. ಉಡುಪಿ ಜಿಲ್ಲೆಯ ಮುಸಲ್ಮಾನರ ಒಂದೂ ಪ್ರತಿರೋಧ ಬಂದಿಲ್ಲ. ಉಡುಪಿ ಬೆಂಗಳೂರಿನ ಮುಸಲ್ಮಾನರು ನನ್ನ ಬೆಂಬಲಕ್ಕಿದ್ದಾರೆ. ನನಗೆ ದೇವರಿದ್ದಾರೆ ಅವರೇ ನನ್ನ ಭದ್ರತೆ. ಉಡುಪಿ ಎಸ್ಪಿ ವಿಷ್ಣುವರ್ಧನ್ ಫೋನ್ ಮಾಡಿದ್ದಾರೆ. ಉಡುಪಿ ಕ್ಷೇತ್ರದ ಜನರೇ ನನಗೆ ಸೆಕ್ಯುರಿಟಿ ಗಾರ್ಡ್ ಎಂದರು.

ಹೈದರಾಬಾದ್ ನಿಂದ ಫೋನ್ ಕರೆ ಮಾಡಿ ಒಬ್ಬ ಹುಚ್ಚ ಮಾತನಾಡಿದ್ದಾನೆ. ಅವನಿಗೆ ಇಪ್ಪತ್ತು ನಿಮಿಷಗಳ ಕಾಲ ಉತ್ತರ ಕೊಟ್ಟಿದ್ದೇನೆ. ಮುಸ್ಲಿಮರಿಗೆ ಸಮಸ್ಯೆಯಿಲ್ಲ ಆರು ಮಕ್ಕಳ ತಲೆ ಹಾಳುಮಾಡಿದ್ದಾರೆ. ಇಂಟರ್ನೆಟ್ ಕಾಲ್ ಮೂಲಕ ಹಲವರು ಬೆದರಿಸುತ್ತಿದ್ದಾರೆ. ಹೈದರಾಬಾದ್ ನಿಂದ ಫೋನ್ ವಾಟ್ಸಪ್ಪ್ ಫೇಸ್ಬುಕ್ ಮೂಲಕ ಥ್ರೆಟ್ ಹಾಕುತ್ತಿದ್ದಾರೆ. ನಾನು ಸಮವಸ್ತ್ರ ವಿಚಾರ ಬಿಟ್ಟು ಬೇರೆ ಯಾವ ವಿಚಾರವೂ ಚರ್ಚೆ ಮಾಡಿಲ್ಲ ಮಾತನಾಡಿಲ್ಲ ಎಂದು ಹೇಳಿದ್ದಾರೆ.

- Advertisement -

Latest News

error: Content is protected !!