Thursday, June 4, 2026
Homeಕರಾವಳಿಜನರ ತೀರ್ಮಾನಕ್ಕೆ ನಾನು ಬದ್ಧ - ಶಾಸಕ ಉಮಾನಾಥ ಕೋಟ್ಯಾನ್

ಜನರ ತೀರ್ಮಾನಕ್ಕೆ ನಾನು ಬದ್ಧ – ಶಾಸಕ ಉಮಾನಾಥ ಕೋಟ್ಯಾನ್

- Advertisement -
- Advertisement -

ಮೂಡಬಿದ್ರೆ: ಜನರು ತಾವು ಬೆಳೆದ ಬೆಳೆ ಮತ್ತು ಭೂಮಿಯ ಮೇಲಿನ ಪ್ರೀತಿ ಬಗ್ಗೆ ತಿಳಿದಿದ್ದೇನೆ. ಜನರ ತೀರ್ಮಾನಕ್ಕೆ ನಾನು ಬದ್ಧನಾಗಿದ್ದೇನೆ ಎಂದು ಮೂಲ್ಕಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.


ಸರ್ಕಾರ ಉಳೆಪಾಡಿ, ಕೊಲ್ಲೂರು, ಬಳಕುಂಜೆಯಲ್ಲಿನ ಭೂ ಸ್ವಾಧೀನದ ಬಗ್ಗೆ ಬಳಕುಂಜೆ ಚರ್ಚ್ ಹಾಲ್‌ನಲ್ಲಿ ನಡೆದ ಜನಜಾಗೃತಿ ಸಭೆಯಲ್ಲಿ ಮಾತನಾಡಿದರು.ನಮ್ಮಸರ್ಕಾರ ಭೂಸ್ವಾಧೀನಕ್ಕೆ ನಿರ್ಧರಿಸಿದೆ. ನಾನು ಸರ್ಕಾರದ ಒಂದು ಭಾಗವಾಗಿದ್ದೇನೆ. ಆದರೆ ಜನರ ಜೊತೆ ನಾನಿದ್ದೇನೆ. ಅಗತ್ಯವಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತುಕತೆ ನಡೆಸಬಹುದಾಗಿದೆ.ಇದಕ್ಕೆ ವ್ಯವಸ್ಥೆ ಮಾಡಲಿದ್ದೇನೆ.


ಮುಂದಿನ ತಿಂಗಳು ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಮಂಗಳೂರಿಗೆ ಆಗಮಿಸಲಿದ್ದು, ಗ್ರಾಮಸ್ಥರು ಮನವಿ ಸಲ್ಲಿಸುವು ದಾದರೆ ಅದಕ್ಕೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದರು.

- Advertisement -

Latest News

error: Content is protected !!