Monday, May 13, 2024
Homeತಾಜಾ ಸುದ್ದಿಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆ: ಆರೋಗ್ಯ ಸಚಿವ ಡಾ. ಸುಧಾಕರ್

ಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆ: ಆರೋಗ್ಯ ಸಚಿವ ಡಾ. ಸುಧಾಕರ್

spot_img
- Advertisement -
- Advertisement -

ಬೆಂಗಳೂರು: ನಿಧಾನಗತಿಯಲ್ಲಿ ದೇಶದೆಲ್ಲೆಡೆ ಕೊವೀಡ್ ಪ್ರಕರಣ ಹೆಚ್ಚಾಗುತ್ತಿದ್ದು 4ನೇ ಅಲೆ ಬಂದಿದೆಯೇ ಎಂಬುವುದರ ಕುರಿತು ಇನ್ನೆರಡು ದಿನದಲ್ಲಿ ವರದಿ ಬರಲಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಸಚಿವರು, ಕೋವಿಡ್ ಬಗ್ಗೆ ಇಲ್ಲಿಯವರೆಗೆ ಐಐಟಿ ಕಾನ್ಪುರದವರು ನಮಗೆ ಅಂಕಿಅಂಶಗಳು ನೀಡುತ್ತಿದ್ದಾರೆ. ಅದರ ಪ್ರಕಾರ ಜೂನ್ ಅಂತ್ಯದಲ್ಲಿ ಕೋವಿಡ್ ಹೆಚ್ಚಾಗುವ ಸಾಧ್ಯತೆಯಿದೆ . ಸೆಪ್ಟೆಂಬರ್-ಅಕ್ಟೋಬರ್ ವರೆಗೂ ಸೋಂಕು ಹೆಚ್ಚಿರುತ್ತದೆ. ಕಳೆದ ಮೂರು ಅಲೆಗಳಲ್ಲಿ ಐಐಟಿ ಕಾನ್ಪುರ ವರದಿ ಸರಿಯಾಗಿತ್ತು ಎಂದು ಸಚಿವರು ಹೇಳಿದ್ದಾರೆ.

ದೇಶಾದ್ಯಂತ ಕೋವಿಡ್ ಕೇಸ್ ಹೆಚ್ಚುತ್ತಿದ್ದು, ನಾಲ್ಕನೇ ಅಲೆ ಭೀತಿ ಆರಂಭವಾಗಿದೆ. ರಾಜ್ಯದಲ್ಲಿ ನಾಲ್ಕನೇ ಅಲೆ ಬಂದಿದೆ ಎಂದು ಅಧಿಕೃತವಾಗಿ ಹೇಳಲಾಗದು. ಇನ್ನೆರಡು ದಿನದಲ್ಲಿ ವರದಿ ಬರಲಿದ್ದು ಆ ಬಳಿಕ ಸ್ಪಷ್ಟ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!