Thursday, June 4, 2026
Homeಕರಾವಳಿಕಡಬ; ಆಡನ್ನು ಬೇಟೆಯಾಡಿ ಸ್ವಲ್ಪ ತಿಂದು ಅದರ ದೇಹವನ್ನು ಮರದ ಗೆಲ್ಲಿಗೆ ನೇತು ಹಾಕಿದ ಚಿರತೆ

ಕಡಬ; ಆಡನ್ನು ಬೇಟೆಯಾಡಿ ಸ್ವಲ್ಪ ತಿಂದು ಅದರ ದೇಹವನ್ನು ಮರದ ಗೆಲ್ಲಿಗೆ ನೇತು ಹಾಕಿದ ಚಿರತೆ

- Advertisement -
- Advertisement -

ಕಡಬ; ಆಡೊಂದನ್ನು ಚಿರತೆಯೊಂದು ಆಡನ್ನು ಬೇಟೆಯಾಡಿ ಅದರ ದೇಹವನ್ನು ಸ್ವಲ್ಪ ತಿಂದು ಬಳಿಕ ಮರದ ಗೆಲ್ಲಿಗೆ ನೇತು ಹಾಕಿದ ಘಟನೆ ಕಡಬ ಸಮೀಪದ ಬೆತ್ತೋಡಿಯಲ್ಲಿ ನಡೆದಿದೆ.

ಬೆತ್ತೋಡಿ ಕಾಲನಿಯ ಕೆ ಎಫ್ ಡಿ ಸಿ ನಿಗಮದ ರಬ್ಬರ್ ತೋಟದಲ್ಲಿ ಈ ದೃಶ್ಯ ಕಂಡು ಬಂದಿದ್ದು ರಬ್ಬರ್ ಟ್ಯಾಂಪಿಂಗ್ ಗೆ ಬಂದ ವ್ಯಕ್ತಿಯೊಬ್ಬರು ವೀಡಿಯೋ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಚಿದ್ದಾರೆ. ಆಡಿನ ಮೃತ ದೇಹದ ಕೆಲ ಭಾಗಗಳನ್ನು ಚಿರತೆ ತಿಂದು ಹಾಕಿದೆ. ಬೆತ್ತೋಡಿ ಕಾನಿಯ ಸುಮಾರು ಐನೂರು ಮೀಟರ್ ವ್ಯಾಪ್ತಿಯಲ್ಲಿ ಚಿರತೆ ಓಡಾಟ ನಡೆಸಿದ ಕುರುಹುಗಳಿವೆ.

ಈ ಹಿಂದೆಯೂ ಈ ಭಾಗದಲ್ಲಿ ಆಡನ್ನು ಚಿರತೆ ಬೇಟೆಯಾಡಿದ ಬಗ್ಗೆ ಸುದ್ದಿಯಾಗಿತ್ತು. ಸದ್ಯ ಸ್ಥಳೀಯರಲ್ಲಿ ಈ ಘಟನೆ ಆತಂಕ ಮೂಡಿಸಿದ್ದು  ಚಿರತೆ ಸೆರೆ ಹಿಡಿಯಲು ಸ್ಥಳೀಯರು ಆಗ್ರಹಿಸಿದ್ದಾರೆ.

- Advertisement -

Latest News

error: Content is protected !!