Thursday, June 4, 2026
Homeಕರಾವಳಿಎದೆಹಾಲು ಕುಡಿಯುವಾಗ ಉಸಿರುಗಟ್ಟಿ 28 ದಿನದ ಮಗು ಸಾವು; ನೊಂದು 7 ವರ್ಷದ ಮಗನೊಂದಿಗೆ ಬಾವಿಗೆ...

ಎದೆಹಾಲು ಕುಡಿಯುವಾಗ ಉಸಿರುಗಟ್ಟಿ 28 ದಿನದ ಮಗು ಸಾವು; ನೊಂದು 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ತಾಯಿ

- Advertisement -
- Advertisement -

ಕೇರಳ: 28 ದಿನದ ಮಗು ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನ್ನಪ್ಪಿದ್ದರಿಂದ ನೊಂದ ತಾಯಿಯೊಬ್ಬರು ತನ್ನ 7 ವರ್ಷದ ಮಗನೊಂದಿಗೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಥಲ್‌ನಲ್ಲಿ ನಡೆದಿದೆ.

ಇಡುಕ್ಕಿ ಜಿಲ್ಲೆಯ ಉಪ್ಪುತಾರ ಪಂಚಾಯತ್‌ನ ಕೈತಪಥಲ್‌ನ ನಿವಾಸಿ ಲಿಜಿ (38) ಮತ್ತು ಅವರ ಮಗ ಬೆನ್ ಟಾಮ್ (7) ಮೃತ ದುರ್ದೈವಿಗಳು.

ಇಡುಕ್ಕಿಯ ಪೂಪ್ಪಾರ ಬಳಿಯ ಲಿಜಿ ಅವರ ಮನೆಯಲ್ಲಿ  ಗುರುವಾರ ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ಮೊನ್ನೆ ದಿನ ಲಿಜಿಯ 28 ದಿನದ ಮಗು ಎದೆಹಾಲು ಕುಡಿಯುವಾಗ ಉಸಿರುಗಟ್ಟಿ ಸಾವನ್ನಪ್ಪಿತ್ತು. ತನ್ನ ನವಜಾತ ಶಿಶುವಿನ ಸಾವಿನಿಂದ ಲಿಜಿ ತೀವ್ರವಾಗಿ ನೊಂದಿದ್ದಳು. ಬುಧವಾರ ಮಗುವಿನ ಅಂತ್ಯಕ್ರಿಯೆ ನಡೆಸಲಾಗಿತ್ತು

ಗುರುವಾರ(ಇಂದು) ಬೆಳಿಗ್ಗೆ ಎಲ್ಲಾ ಸಂಬಂಧಿಕರು ಚರ್ಚ್‌ಗೆ ಹೋದಾಗ ಲಿಜಿ ಮತ್ತು ಅವರ ಮಗ ಮನೆಗೆ ಬಂದಿದ್ದರು. ಸಂಬಂಧಿಕರು ಲಿಜಿ ಮನೆಗೆ ನೋಡಿದಾಗ ಮನೆಯಲ್ಲಿ ಇಬ್ಬರೂ ಕಾಣಲಿಲ್ಲ. ನಂತರ ನಡೆದ ಹುಡುಕಾಟ ಮಾಡಿದಾಗ ಅವರ ಮೃತದೇಹಗಳು ಮನೆಯ ಸಮೀಪದ ಬಾವಿಯಲ್ಲಿ ಪತ್ತೆಯಾಗಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

- Advertisement -

Latest News

error: Content is protected !!