Thursday, May 23, 2024
Homeಕರಾವಳಿಭಾರಿ ಪ್ರಮಾಣದಲ್ಲಿ ಮೀನುಗಾರಿಕೆ; ಮೀನುಗಾರರು ಫುಲ್ ಖುಷ್!

ಭಾರಿ ಪ್ರಮಾಣದಲ್ಲಿ ಮೀನುಗಾರಿಕೆ; ಮೀನುಗಾರರು ಫುಲ್ ಖುಷ್!

spot_img
- Advertisement -
- Advertisement -

ಮಂಗಳೂರು : ಕಳೆದ ವರ್ಷ ಕೋವಿಡ್‌ ಹಾಗೂ ಚಂಡ ಮಾರುತದಿಂದ ತತ್ತರಿಸಿ ಹೋಗಿದ್ದ ಮೀನುಗಾರರಿಗೆ ಈ ವರ್ಷದ ಮೀನುಗಾರಿಕೆ ಋತುವಿನ ಶುರುವಿನಿಂದಲೇ ಭರಪೂರ ಮೀನುಗಾರಿಕೆಯಾಗಿದೆ.

ಈ ಬಾರಿಯ ಮೀನು ಲಭ್ಯತೆ ಕೂಡ ಕಳೆದ ಬಾರಿಗಿಂತ ಅಧಿಕವಾಗಿದ್ದು, ಹೀಗಾಗಿ ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ವಿವಿಧ ಬಗೆಯ ಮೀನುಗಳು ಸಿಗಲಾರಂಭಿಸಿದೆ.

ಕಪ್ಪೆ ಬೊಂಡಾಸ್‌, ಕೋಲು ಬೊಂಡಾಸ್‌, ರಾಣಿ ಫಿಶ್‌ ಮೊದಲಾದ ವಿದೇಶಕ್ಕೆ ರಫ್ತಾಗುವ ಮೀನುಗಳು ಕೂಡ ವಿಪುಲ ಪ್ರಮಾಣದಲ್ಲಿ ಟ್ರಾಲ್‌ಬೋಟ್‌ನವರಿಗೆ ಲಭಿಸಿದ್ದರೆ, ಪರ್ಶಿಯನ್‌ ಬೋಟ್‌ಗಳಿಗೂ ಇಳುವರಿ ಉತ್ತಮವಾಗಿದೆ.

ಜೂನ್‌-ಜುಲೈ ತಿಂಗಳ ರಜೆ ಬಳಿಕ ಆ. 1ರಂದು ಮೀನುಗಾರಿಕೆ ಆರಂಭಗೊಳ್ಳಬೇಕಿತ್ತು. ಬೋಟ್‌ ಮಾಲಕರಿಗೆ ಡೀಸೆಲ್‌ ಸಬ್ಸಿಡಿಯ ಪಾಸ್‌ ಬುಕ್‌ ಸಿಗುವಾಗ ವಿಳಂಬವಾಗಿದ್ಧರಿಂದ ಬೋಟ್‌ಗಳು ಆ. 15ರ ಬಳಿಕ ಡೀಸೆಲ್‌ ಡೆಲಿವರಿ ಪಾಯಿಂಟ್‌ನಲ್ಲಿ ಕರ ರಹಿತ ದರದಲ್ಲಿ ಡೀಸೆಲ್‌ ಪಡೆದು ಪೂರ್ಣ ಪ್ರಮಾಣದಲ್ಲಿ ಮೀನುಗಾರಿಕೆಗೆ ತೆರಳಿವೆ.

ಈ ವರ್ಷದ ಮೀನುಗಾರಿಕೆಯಲ್ಲಿ ಅಂಜಲ್‌, ಬೊಂಡಾಸ್‌, ಕಪ್ಪೆ ಬೊಂಡಾಸ್‌, ಮದ್ಮಲ್‌, ಫಿಶ್‌ ಮೀಲ್‌ಗೆ ಹೋಗುವ ಮುರಿ ಮೀನ್‌ ಸಹಿತ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಮಂಗಳೂರು ಸಹಿತ ಜಿಲ್ಲಾದ್ಯಂತ ಮೀನು ಸಾಗಾಟ ಅಧಿಕವಾಗಿದೆ. ಹೀಗಾಗಿ ಮೀನುಗಾರಿಕೆಯನ್ನೇ ನಂಬಿಕೊಂಡಿರುವ ಸಾವಿರಾರು ಮಂದಿಯ ಕುಟುಂಬದಲ್ಲಿ ಸಂತಸದ ನಗು ಮೂಡಿದೆ. ಆದರೆ ಈ ಬಾರಿಯ ಮೀನುಗಾರಿಕೆ ಋತು ಆರಂಭವಾದಂದಿನಿಂದ ಇಲ್ಲಿಯವರೆಗೆ ಉತ್ತಮ ಮೀನುಗಾರಿಕೆ ನಡೆದಿದ್ದು, ಮೀನು ಲಭ್ಯತೆ ಕೂಡ ಕಳೆದ ಬಾರಿಗಿಂತ ಅಧಿಕವಾಗಿದೆ. ಹೀಗಾಗಿ ಮೀನು ಪ್ರಿಯರಿಗೆ ಸ್ಥಳೀಯವಾಗಿ ಅಗ್ಗದ ದರದಲ್ಲಿ ವಿವಿಧ ಬಗೆಯ ಮೀನುಗಳು ಸಿಗಲಾರಂಭಿಸಿದೆ.

ಈ ವರ್ಷದ ಮೀನುಗಾರಿಕೆಯಲ್ಲಿ ಅಂಜಲ್‌, ಬೊಂಡಾಸ್‌, ಕಪ್ಪೆ ಬೊಂಡಾಸ್‌, ಮದ್ಮಲ್‌, ಫಿಶ್‌ ಮೀಲ್‌ಗೆ ಹೋಗುವ ಮುರಿ ಮೀನ್‌ ಸಹಿತ ಉತ್ತಮ ಮೀನುಗಾರಿಕೆ ನಡೆಯುತ್ತಿದೆ. ಮಂಗಳೂರು ಸಹಿತ ಜಿಲ್ಲಾದ್ಯಂತ ಮೀನು ಸಾಗಾಟ ಅಧಿಕವಾಗಿದೆ.

- Advertisement -
spot_img

Latest News

error: Content is protected !!