Saturday, June 6, 2026
HomeUncategorizedಸುಳ್ಯ: ಸಂಪಾಜೆ ಬಳಿಯ ಚೆಂಬುವಿನಲ್ಲಿ ಭಾರೀ ಭೂ ಕುಸಿತ: ಏಳು ಕಿ.ಮೀ. ದೂರ ಕೊಚ್ಚಿ ಬಂದ...

ಸುಳ್ಯ: ಸಂಪಾಜೆ ಬಳಿಯ ಚೆಂಬುವಿನಲ್ಲಿ ಭಾರೀ ಭೂ ಕುಸಿತ: ಏಳು ಕಿ.ಮೀ. ದೂರ ಕೊಚ್ಚಿ ಬಂದ ನಾಲ್ಕು ಕಾಲು ಬೆಟ್ಟ

- Advertisement -
- Advertisement -

ಸುಳ್ಯ: ದಕ್ಷಿಣಕನ್ನಡ ಹಾಗೂ ಕೊಡಗು ಜಿಲ್ಲೆಯ ಗಡಿಭಾಗಗಳಲ್ಲಿ ವರುಣನ ರೌದ್ರ ನರ್ತನ ಮುಂದುವರೆದಿದೆ.  ಸಂಪಾಜೆ ಬಳಿಯ ಚೆಂಬು ಗ್ರಾ.ಪಂ ವ್ಯಾಪ್ತಿಯ ದಬ್ಬಡ್ಕ ಗ್ರಾಮದಲ್ಲಿ ಭಾರೀ ಭೂ ಕುಸಿತ ಉಂಟಾಗಿದೆ. ಇಲ್ಲಿರುವ ನಾಲ್ಕು ಕಾಲು ಬೆಟ್ಟ ಏಳು ಕಿ.ಮೀ. ದೂರ ಕೊಚ್ಚಿ ಬಂದಿದೆ.

ಭೂ ಕುಸಿತದ ವೇಳೆ ಭಾರೀ ಜಲಸ್ಫೋಟ ಉಂಟಾಗಿದೆ. ಭಯಾನಕ ಶಬ್ಧದೊಂದಿಗೆ ನಾಲ್ಕು ಕಾಲು ಗುಡ್ಡ ಕೊಚ್ಚಿ ಬಂದಿದೆ.ಇದರಿಂದ ಭಯಭೀತರಾದ ದಬ್ಬಡ್ಕ, ಕೊಪ್ಪ, ಅಡ್ಡಹೊಳೆ ನಿವಾಸಿಗಳು  ನಿನ್ನೆಯೇ ಊರು ತೊರೆದು ಸಂಬಂಧಿಕರ ಮನೆಗಳಿಗೆ ತೆರಳಿದ್ದಾರೆ. ಇನ್ನು ಭೂ ಕುಸಿತವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

- Advertisement -

Latest News

error: Content is protected !!