- Advertisement -
![]()
- Advertisement -
ಮಂಗಳೂರು: ಕರಾವಳಿ ಪ್ರದೇಶದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಪರಿಣಾಮ ದಕ್ಷಿಣ ರೈಲ್ವೆಗೆ ಸೇರಿದ ಕುಲಶೇಖರ ರೈಲ್ವೆ ಟನಲ್ ಬಳಿ ಜು.16 ರಂದು ಭೂ ಕುಸಿತ ಉಂಟಾಗಿದ್ದು,ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ರೈಲ್ವೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಈ ಕುರಿತಂತೆ ಮಾಹಿತಿ ನೀಡಿರುವಂತ ಮಂಗಳೂರು ರೈಲ್ವೆ ಇಲಾಖೆಯ ಅಧಿಕಾರಿಗಳು, ಮಂಗಳೂರು ಜಂಕ್ಷನ್ ರೈಲ್ವೆ ಮಾರ್ಗದಿಂದ ತೋಕೂರು ರೈಲ್ವೆ ಮಾರ್ಗ ಮಧ್ಯೆ ಕುಲಶೇಖರ ರೈಲ್ವೆ ಟನಲ್ ಬಳಿ ಭಾರೀ ಮಳೆಗೆ ಭೂ ಕುಸಿತ ಉಂಟಾಗಿರುವ ಹಿನ್ನಲೆಯಲ್ಲಿ ಈ ರೈಲ್ವೆ ಮಾರ್ಗದಲ್ಲಿ ರೈಲು ಸಂಚಾರ ಏರು ಪೇರಾಗಿದೆ.ದುರಸ್ತಿ ಕಾರ್ಯ ನಡೆಯುವವರೆಗೆ ಈ ಮಾರ್ಗದಲ್ಲಿ ರೈಲು ಸಂಚಾರ ಇರುವುದಿಲ್ಲ ಎಂಬುದಾಗಿ ತಿಳಿಸಿದ್ದಾರೆ.
- Advertisement -


