Sunday, June 16, 2024
HomeUncategorizedರಾಷ್ಟ್ರ ಪ್ರಶಸ್ತಿ ವಿಜೇತೆ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ!!

ರಾಷ್ಟ್ರ ಪ್ರಶಸ್ತಿ ವಿಜೇತೆ ಸುರೇಖಾ ಸಿಕ್ರಿ ಹೃದಯಾಘಾತದಿಂದ ನಿಧನ!!

spot_img
- Advertisement -
- Advertisement -

ನವದೆಹಲಿ : ರಾಷ್ಟ್ರೀಯ ಚಲನಚಿತ್ರ ಪುರಸ್ಕೃತೆ ಖ್ಯಾತ ಹಿಂದಿ ಚಿತ್ರನಟಿ ಮತ್ತು ಕಿರುತೆರೆ ನಟಿ ಸುರೇಖಾ ಸಿಕ್ರಿ ಹೃದಯಾಘಾತದಿಂದ ವಿಧಿವಶರಾಗಿದ್ಧಾರೆ.

2018ರಲ್ಲಿ ಸುರೇಖಾ ಸಿಕ್ರಿ ಅವರು ಮಹಾರಾಷ್ಟ್ರದ ಮಹಾಬಲೇಶ್ವರದಲ್ಲಿ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದಾಗ ಬಾಥ್ ರೂಮ್​ನಲ್ಲಿ ಜಾರಿ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಆಗ ಅವರಿಗೆ ಮೊದಲು ಬ್ರೇನ್ ಸ್ಟ್ರೋಕ್ ಆಗಿದ್ದು. ಆಗಿನಿಂದಲೂ ಅವರಿಗೆ ಕೆಲಸ ಕಾರ್ಯದಲ್ಲಿ ಪಾಲ್ಗೊಳ್ಳುವ ಶಕ್ತಿ ಕುಂದಿಹೋಗಿತ್ತು.

2020ರಲ್ಲಿ ಅವರಿಗೆ ಎರಡನೇ ಬಾರಿ ಬ್ರೇನ್ ಸ್ಟ್ರೋಕ್ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದರೆನ್ನಲಾಗಿದೆ. ದೆಹಲಿಯಲ್ಲಿ ಜನಿಸಿದ ಸುರೇಖಾ ಸಿಕ್ರಿ ಅವರ ತಂದೆ ವಾಯುಪಡೆಯ ಉದ್ಯೋಗಿ. ಇವರು ನಾಸಿರುದ್ದೀನ್ ಶಾ ಅವರ ಸಂಬಂಧಿಯೂ ಹೌದು. ರಂಗಭೂಮಿ ಕಲಾವಿದೆಯಾಗಿದ್ದ ಸುರೇಖಾ ಸಿಕ್ರಿ 1978ರಲ್ಲಿ ಕಿಸ್ಸಾ ಕುರ್ಸಿ ಕಾ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಒಂದು ಮಲಯಾಳಂ ಚಿತ್ರಗಳಲ್ಲೂ ಅವರು ನಟಿಸಿದ್ದಾರೆ. ಮೂರು ಸಿನಿಮಾಗಳಲ್ಲಿ ಪೋಷಕ ನಟಿಯಾಗಿ ಅವರು ರಾಷ್ಟ್ರ ಪ್ರಶಸ್ತಿ ಪಡೆದಿದ್ದಾರೆ. ತಮಸ್ (1988), ಮಾಮೋ (1995) ಮತ್ತು ಬಧಾಯಿ ಹೋ (2018) ಸಿನಿಮಾಗಳಲ್ಲಿ ಅವರ ನಟನೆಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿದೆ. ಆದರೆ, ಸುರೇಖಾ ಸಿಕ್ರಿ ಹೆಚ್ಚು ಮನೆಮಾತಾಗಿದ್ದು ಅವರು ಕಿರುತೆರೆಯಲ್ಲಿ ನಟಿಸಿದ ಬಾಲಿಕಾ ವಧು ಸೀರಿಯಲ್ ಮೂಲಕ. ಈ ಧಾರವಾಹಿಯಲ್ಲಿ ವಿಲನ್ ಪಾತ್ರ ಮಾಡಿದ್ದಕ್ಕೆ ಅವರಿಗೆ 2008ರಲ್ಲಿ ಇಂಡಿಯನ್ ಟೆಲ್ಲಿ ಪ್ರಶಸ್ತಿ ದೊರಕಿತ್ತು. ಹಿಂದಿ ರಂಗಭೂಮಿಯಲ್ಲಿ ಅವರು ಸಲ್ಲಿಸಿದ ಸೇವೆಗೆ 1989ರಲ್ಲಿ ಸಂಗೀತ್ ನಾಟಕ್ ಅಕಾಡೆಮಿ ಪ್ರಶಸ್ತಿ ಬಂದಿತ್ತು.



- Advertisement -
spot_img

Latest News

error: Content is protected !!