- Advertisement -
- Advertisement -
ಮಡಿಕೇರಿ: ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ ಗ್ರಾಮದಲ್ಲಿ ಕಳೆದ ರಾತ್ರಿ ಭಾರೀ ಭೂ ಕುಸಿತ ಸಂಭವಿಸಿದೆ.
ಸುಮಾರು ಐದು ಕಿಲೋ ಮೀಟರ್ ದೂರದಿಂದ ಮಳೆಗೆ ಗುಡ್ಡದ ಮಣ್ಣು ಕೊಚ್ಚಿಕೊಂಡು ಬಂದಿದೆ.
ಕಳೆದ ರಾತ್ರಿ ನಡೆದಿರುವ ಈ ಘಟನೆಗೆ ಎರಡನೇ ಮೊಣ್ಣಂಗೇರಿ ಗ್ರಾಮಸ್ಥರು ಬೆಚ್ಚಿ ಬಿದ್ದಿದ್ದು, ಭಾರೀ ಶಬ್ಧಕ್ಕೆ ಹೆದರಿ ಕತ್ತಲಿನಲ್ಲೇ ಮನೆ ಬಿಟ್ಟು ಪ್ರಾಣ ರಕ್ಷಣೆಗಾಗಿ ಮನೆಯಿಂದ ಹೊರಗೆ ಓಡಿ ಹೋಗಿದ್ದಾರೆ.
ಬೆಳಗಿನ ಜಾವ ಮನೆಗಳಿಗೆ ಗ್ರಾಮಸ್ಥರು ಮರಳಿದ್ದು, ರಾಮಕೊಲ್ಲಿ – 2ನೇ ಮೊಣ್ಣಂಗೇರಿ ಸಂಪರ್ಕಿಸುವ ಸೇತುವೆ ಕಡಿತಗೊಂಡಿದೆ.
ಭೂ ಕುಸಿತಕ್ಕೆ ಬೃಹತ್ ಬಂಡೆ, ಕಲ್ಲು, ಮಣ್ಣು, ಮರದ ದಿಮ್ಮಿಗಳು ಕೆಸರು ಮಿಶ್ರಿತ ಮಳೆಯ ನೀರಿನಲ್ಲಿ ಕೊಚ್ಚಿಕೊಂಡು ಬಂದಿವೆ.
- Advertisement -