Saturday, June 6, 2026
Homeಕರಾವಳಿಉಡುಪಿಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ಉಡುಪಿಯಲ್ಲಿ ಭವ್ಯ ಸ್ವಾಗತ

ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ಉಡುಪಿಯಲ್ಲಿ ಭವ್ಯ ಸ್ವಾಗತ

- Advertisement -
- Advertisement -

ಉಡುಪಿ: ಫೆಮಿನಾ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿರುವ
ಉಡುಪಿ ಜಿಲ್ಲೆಯ ಬೆಳ್ಳಂಪಳ್ಳಿ ಮೂಲದ ಸಿನಿ ಶೆಟ್ಟಿಗೆ ತವರು ಜಿಲ್ಲೆಯಲ್ಲಿ ಭರ್ಜರಿ ಸ್ವಾಗತ ನೀಡಲಾಗಿದೆ.

ಮಿಸ್ ಇಂಡಿಯಾ ಆಗಿ ಆಯ್ಕೆಯಾದ ಬಳಿಕ ಸಿನಿ ಶೆಟ್ಟಿ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ್ದು, ಜೋಡು ಕಟ್ಟೆ ಮೂಲಕ ಭವ್ಯ ಸ್ವಾಗತ ನೀಡಲಾಗಿದೆ.

ತೆರೆದ ವಾಹನದಲ್ಲಿ ಮೆರವಣಿಗೆಯ ಮೂಲಕ ಕರೆ ತಂದು ಚಂಡೆ ವಾದನ, ಆರತಿಯೊಂದಿಗೆ ಸ್ವಾಗತ ಕೋರಲಾಗಿದೆ.

ತಂದೆ ಸದಾನಂದ ಶೆಟ್ಟಿ ಮತ್ತು ತಾಯಿ ಹೇಮ ಶೆಟ್ಟಿ ಜೊತೆಗೆ ಮೆರವಣಿಗೆಯಲ್ಲಿ ಆಗಮಿಸಿದ ಸಿನಿ ಶೆಟ್ಟಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದರು‌.

ಉಡುಪಿ ನಗರ ಅಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಸಂಘದಿಂದ ಸನ್ಮಾನ ಹಮ್ಮಿಕೊಳ್ಳಲಾಗಿತ್ತು.

- Advertisement -

Latest News

error: Content is protected !!