Thursday, June 4, 2026
Homeಕರಾವಳಿಮಂಗಳೂರುಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಕುಸಿದ ಮಣ್ಣು; ಅಪಾಯಕ್ಕೆ ಸಿಲುಕಿದ ಆರು ಮನೆಗಳು

ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಕುಸಿದ ಮಣ್ಣು; ಅಪಾಯಕ್ಕೆ ಸಿಲುಕಿದ ಆರು ಮನೆಗಳು

- Advertisement -
- Advertisement -

ತಾಲೂಕಿನ ಕಾವೂರು ಸೂಜಿಕಲ್ ಗುಡ್ಡೆಯಲ್ಲಿ ಸಂಭವಿಸಿದೆ.

ಮಣ್ಣು ಕುಸಿತದಿಂದಾಗಿ ಮನೆಗಳು ಅಪಾಯದ ಪರಿಸ್ಥಿತಿಯಲ್ಲಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಗುಡ್ಡ ಅಗೆದಿರುವುದರಿಂದ ಮಣ್ಣು ಕುಸಿದಿದೆ ಎಂದು ಹೇಳಲಾಗಿದೆ.

ಅಪಾಯಕ್ಕೆ ಸಿಲುಕಿರುವ ಆರು ಮನೆಗಳು ಮೂವತ್ತು ಅಡಿಗೂ ಎತ್ತರದಲ್ಲಿದ್ದು, ಆರೂ ಮನೆಗಳ ನಿವಾಸಿಗಳನ್ನು ಮುನ್ನೆಚ್ಚರಿಕೆಯ ಕ್ರಮವಾಗಿ ಸ್ಥಳಾಂತರ ಮಾಡಲಾಗಿದೆ

ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ‌ ನೀಡಿ ಪರಿಶೀಲನೆ ನಡೆಸಿದ್ದು, ಅವಘಡಕ್ಕೆ ಕಾರಣವಾದ ಖಾಸಗಿ ಕಟ್ಟಡದ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ಸೂಚನೆ ನೀಡಿದ್ದಾರೆ.

ಅಲ್ಲದೇ, ಖಾಸಗಿ ಕಟ್ಟಡದ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಲು ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ

- Advertisement -

Latest News

error: Content is protected !!