Friday, May 17, 2024
Homeತಾಜಾ ಸುದ್ದಿಅಕ್ಕನ ಮನೆಯಲ್ಲಿ ಚಿನ್ನ ಕದ್ದು ಸಿಕ್ಕಿ ಬಿದ್ದ ತಂಗಿ

ಅಕ್ಕನ ಮನೆಯಲ್ಲಿ ಚಿನ್ನ ಕದ್ದು ಸಿಕ್ಕಿ ಬಿದ್ದ ತಂಗಿ

spot_img
- Advertisement -
- Advertisement -

ಬೆಂಗಳೂರು: ಅಕ್ಕನ ಮನೆಯಲ್ಲಿ ಚಿನ್ನಾಭರಣ ಕಳವು ಮಾಡಿದ್ದ ತಂಗಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರಿನ ನಂದಿನಿ ಲೇಔಟ್ ನಲ್ಲಿ ನಡೆದಿದೆ.ಬಂಧಿತ ಮಹಿಳೆಯಿಂದ 9 ಲಕ್ಷ ರೂ. ಬೆಲೆಯ 220 ಗ್ರಾಂ ಚಿನ್ನಾಭರಣ ವಶಪಡಿಸಿಕೊಂಡಿದ್ದಾರೆ.

ಬೆಂಗಳಬೂರಿನ ಲಗ್ಗೆರೆಯ ಚೌಡೇಶ್ವರಿನಗರ ನಿವಾಸಿ ಶಶಿಕಲಾ(35) ಬಂಧಿತ ಮಹಿಳೆ. ಚೌಡೇಶ್ವರಿನಗರದಲ್ಲಿ ವಾಸವಿರುವ ಮೀನಾ ಅವರಿಗೆ ಕಿವಿ ಕೇಳಿಸುವುದಿಲ್ಲ ಮತ್ತು ಮಾತನಾಡಲು ಬರುವುದಿಲ್ಲ. ಮೀನಾ ಅವರ ತಂಗಿ ಶಶಿಕಲಾ ಅವರು ಇವರ ಮನೆಯ ಮೊದಲನೆ ಮಹಡಿಯಲ್ಲಿ ವಾಸವಾಗಿದ್ದಾರೆ.

ಮಾ.3ರಂದು ಮೀನಾ ಅವರು, ಅಜ್ಜಿ ಮನೆಗೆ ಹೋಗುವ ಸಲುವಾಗಿ ಒಡವೆ ಹಾಕಿಕೊಳ್ಳಲು ಬೀರು ತೆಗೆದು ನೋಡಿದಾಗ ಬೀರುವಿನಲ್ಲಿದ 220 ಗ್ರಾಂ ತೂಕದ ಆಭರಣಗಳು ನಾಪತ್ತೆಯಾಗಿತ್ತು. ಈ ಬಗ್ಗೆ ಮೀನಾ ಅವರ ಮಗ ಮೆಡಿಕಲ್ ರೆಪ್ರೆಸಿಂಟೇಟ್ ಆಗಿರುವ ವಿಜಯಕುಮಾರ್ ನಂದಿನಿಲೇಔಟ್ ಪೊಲೀಸರಿಗೆ ದೂರು ನೀಡಿ, ತನ್ನ ಚಿಕ್ಕಮ್ಮ ಶಶಿಕಲಾ ಅವರ ಮೇಲೆ ಅನುಮಾನ ವ್ಯಕ್ತಪಡಿಸಿದ್ದರು.

ಪ್ರಕರಣ ದಾಖಲಿಸಿಕೊಂಡು ತನಿಖೆಗೊಂಡ ಪೊಲೀಸರು, ಶಶಿಕಲಾಳನ್ನು ಬಂಸಿ ವಿಚಾರಣೆಗೊಳಪಡಿಸಿದಾಗ ತಾನೇ ಆಭರಣ ಕಳ್ಳತನ ಮಾಡಿದ್ದಾಗಿ ಒಪ್ಪಿಕೊಂಡಿದ್ದಾಳೆ. ಅಕ್ಕ ಮೀನಾ ಅವರು ರಾತ್ರಿ ವೇಳೆ ಮಲಗುವಾಗ ಬೀರು ಕೀಯನ್ನು ತಲೆದಿಂಬಿನ ಕೆಳಗೆ ಇಟ್ಟುಕೊಂಡು ಮಲಗುತ್ತಿದ್ದರು. ಅದನ್ನು ಗಮನಿಸಿ ಅಕ್ಕ ಒಬ್ಬರೇ ಇದ್ದಾಗ ಅವರಿಗೆ ಗೊತ್ತಾಗದ ರೀತಿ ಕೀ ತೆಗೆದುಕೊಂಡು ಬೀರುವಿನಲ್ಲಿದ್ದ ಆಭರಣಗಳನ್ನು ಕಳವು ಮಾಡಿ ನಂತರ ಕೀಯನ್ನು ದಿಂಬಿನ ಕೆಳಗೆ ಹಾಗೆಯೇ ಇಟ್ಟಿದ್ದುದಾಗಿ ವಿಚಾರಣೆ ವೇಳೆ ತಿಳಿಸಿದ್ದಾಳೆ.

ಈಕೆಯ ಹೇಳಿಕೆ ಮೇರೆಗೆ ಸುಮಾರು 9 ಲಕ್ಷ ರೂ. ಬೆಲೆ ಬಾಳುವ 220 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳುವಲ್ಲಿ ನಂದಿನಿ ಲೇಔಟ್ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ. ಮಲ್ಲೇಶ್ವರಂ ಉಪವಿಭಾಗದ ಎಸಿಪಿ ವೆಂಕಟೇಶ್ ನಾಯ್ಡು ಮಾರ್ಗದರ್ಶನದಲ್ಲಿ ಇನ್ಸ್ಪೆ್ಕ್ಟರ್ ವೆಂಕಟೇಗೌಡ ಹಾಗೂ ಸಿಬ್ಬಂದಿ ಈ ಕಾರ್ಯಾಚರಣೆ ಕೈಗೊಂಡಿದ್ದರು.

- Advertisement -
spot_img

Latest News

error: Content is protected !!