Thursday, June 4, 2026
Homeಉತ್ತರ ಕನ್ನಡಭಟ್ಕಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

ಭಟ್ಕಳದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವಪತ್ತೆ ಪ್ರಕರಣ: ಇಬ್ಬರನ್ನು ಬಂಧಿಸಿದ ಪೊಲೀಸರು

- Advertisement -
- Advertisement -

ಭಟ್ಕಳ : ಮೇ.24ರಂದು ಭಟ್ಕಳ ತಾಲೂಕಿನ ತಲಾನ್ ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಶವ ಪತ್ತೆಯಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪೊಲೀಸರು ಇಬ್ಬರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ಸಾಗರದ ಕಟ್ಟಿನಕಾರ ನಿವಾಸಿ ನಾಗಪ್ಪ ಹಾಗೂ ತಲಾಂದ ನಿವಾಸಿ ಮಾಸ್ತಪ್ಪ ಬಂಧಿತರು.

ಮೇ.21ರಂದು ರಾತ್ರಿ 7.30ರ ಸುಮಾರಿಗೆ ಮಾಸ್ತಪ್ಪ ಮಂಜಪ್ಪ ನಾಯ್ಕ ಇವರ ಮನೆಗೆ ಆತನ ಅಣ್ಣನ ಮಗ ನಾಗಪ್ಪ ನಾರಾಯಣ ನಾಯ್ಕ ಬಾಡಿಗೆ ರಿಕ್ಷಾ ಒಂದರಲ್ಲಿ ಓರ್ವ ಮಹಿಳೆಯನ್ನು ಕರೆದುಕೊಂಡು ಬಂದಿದ್ದು ಯಾವುದೋ ಉದ್ದೇಶಕ್ಕೆ ರಾತ್ರಿ ಆಕೆಯನ್ನು ಕೊಲೆ ಮಾಡಿ ಯಾರಿಗೂ ಗೊತ್ತಾಗದ ರೀತಿಯಲ್ಲಿ ಇಬ್ಬರೂ ಸೇರಿ ಬೆಳಗಾಗುವುದರೊಳಗಾಗಿ ಮಹಿಳೆಯ ಶವವನ್ನು ಹತ್ತಿರದ ಮಣ್ಣಿನ ಗುಡ್ಡದ ಮೇಲೆ ಎಸೆದಿದ್ದಾರೆ.

ಬಾಬ್ತು ತಲಾಂದ ಗ್ರಾಮದ ಕೊಲ್ಲಿಮುಲ್ಲೆ ನಿವಾಸಿ ಗಣಪತಿ ರಾಮಚಂದ್ರ ನಾಯ್ಕ ಎನ್ನುವವರು ಮೇ.24ರಂದು ಬೆಳಿಗ್ಗೆ ಆ ಭಾಗದಲ್ಲಿ ಹೋಗುತ್ತಿದ್ದಾಗ ವಾಸನೆ ಬರುತ್ತಿರುವುದರಿಂದ ಮಹಿಳೆ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನು ಕಂಡ ಅವರು ಗ್ರಾಮೀಣ ಠಾಣೆಗೆ ದೂರು ನೀಡಿದ್ದರು.ದೂರನ್ನು ಆಧರಿಸಿ ತನಿಖೆಗೆ ಇಳಿದ ಪೊಲೀಸರು ಇಬ್ಬರನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದ್ದಾರೆ.

- Advertisement -

Latest News

error: Content is protected !!