Wednesday, July 15, 2026
Homeಕರಾವಳಿಪುತ್ತೂರು: 13ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ

ಪುತ್ತೂರು: 13ಕ್ಕೂ ಹೆಚ್ಚು ಮಂದಿಗೆ ಕಚ್ಚಿದ ಹುಚ್ಚು ನಾಯಿ

- Advertisement -
- Advertisement -


ಪುತ್ತೂರು :
ಹುಚ್ಚುನಾಯಿಯೊಂದು 13ಕ್ಕೂ ಹೆಚ್ಚು ಜನರಿಗೆ ಕಚ್ಚಿರುವ ಘಟನೆ ಪುತ್ತೂರಿನಲ್ಲಿ ನಡೆದಿದೆ. ಒಂದೇ ದಿನ 13ಕ್ಕೂ ಹೆಚ್ಚು ಜನರಿಗೆ ಕಚ್ಚಿದೆ ಎನ್ನಲಾಗಿದೆ.

ನೆಹರೂನಗರ, ಬನ್ನೂರು, ಬೊಳುವಾರು, ಬಲಮುರಿ ಮೊದಲಾದ ಪ್ರದೇಶದಲ್ಲಿ ಈ ಹುಚ್ಚುನಾಯಿ ಓಡಾಡಿದ್ದು, ಮೂವರು ಬಾಲಕರು ಸೇರಿದಂತೆ ಸುಮಾರು 13 ಜನರಿಗೆ ಕಚ್ಚಿದೆ.

ಈ ಬಗ್ಗೆ ಮಾಹಿತಿ ಪಡೆದ ನಗರಸಭಾ ಅಧ್ಯಕ್ಷ ಜೀವಂಧರ ಜೈನ್ ಅವರು ಅಧಿಕಾರಿಗಳಿಗೆ ತುರ್ತು ಆದೇಶ ನೀಡಿ ಕಾರ್ಯಾಚರಣೆಗೆ ಸೂಚಿಸಿದ್ದಾರೆ. ಬಳಿಕ ಕಾರ್ಯಾಚರಣೆ ನಡೆಸಿ ನಾಯಿಯನ್ನು ಸೆರೆ ಹಿಡಿಯಲಾಯಿತು.

ನಗರಸಭೆ ಸದಸ್ಯ ಶಿವರಾಮ ಸಫಲ್ಯ ಮತ್ತಿತರರ ಸಹಕಾರದೊಂದಿಗೆ ನಾಯಿ ಕಡಿತಕ್ಕೆ ಒಳಗಾದವರೆಲ್ಲ ಸರಕಾರಿ ಆಸ್ಪತ್ರೆಗೆ ಬಂದು ರ‍್ಯಾಬಿಸ್ ನಿರೋಧಕ ಚುಚ್ಚುಮದ್ದು ಪಡೆದುಕೊಂಡಿದ್ದಾರೆ.

- Advertisement -

Latest News

error: Content is protected !!