Friday, June 26, 2026
Homeಕರಾವಳಿಉಡುಪಿಕುಂದಾಪುರ: ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ

ಕುಂದಾಪುರ: ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ

- Advertisement -
- Advertisement -

ಕುಂದಾಪುರ: ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಬಳ್ಕೂರು ಎಂಬಲ್ಲಿ ನಡೆದಿದೆ. ವಿನಯ್ ಭಂಡಾರಿ ಎಂಬವರ ಪತ್ನಿ ಶ್ರುತಿ (33) ಮೃತ ಮಹಿಳೆ.

ಶೃತಿ ಹಾಗೂ ವಿನಯ್ ಅಂತರ್ಜಾತಿ ವಿವಾಹವಾಗಿದ್ದರು. ಸಾಲಿಗ್ರಾಮದ ಮೂಲದ ಶೃತಿ ಬ್ರಾಹ್ಮಣರಾಗಿದ್ದು ಕಾಲೇಜು ಸಂದರ್ಭದಲ್ಲಿ ವಿನಯ್ ಅವರನ್ನು ಪ್ರೀತಿಸಿ ಮದುವೆಯಾಗಿದ್ದರು. ಪ್ರಸ್ತುತ ಬಳ್ಕೂರು ಸಮೀಪದ ಬಿಹೆಚ್ ಎಂಬಲ್ಲಿ ನೆಲೆಸಿದ್ದ ವಿನಯ್ ಹಾಗೂ ಶೃತಿ ದಂಪತಿ, ಬಳ್ಕೂರಿನಲ್ಲಿ ಜಾಗ ಖರೀದಿ ಮಾಡಿದ್ದರು ಎನ್ನಲಾಗಿದೆ. ಈ ಸಂಬಂಧ ಬುಧವಾರ ಜಾಗದ ನೋಂದಣಿಗೆ ಹೋಗಿ ಬಂದಿದ್ದರು. ಬಳಿಕ ಶ್ರುತಿ ಅವರು ತನ್ನ ಸ್ಕೂಟಿಯಲ್ಲಿ ಬಳ್ಕೂರು ಸಮೀಪದ ಹೊಳೆಯ ಬದಿಗೆ ಹೋಗಿದ್ದು ಅಲ್ಲಿ ಸ್ಕೂಟಿಯನ್ನು ನಿಲ್ಲಿಸಿ, ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. 

ಘಟನೆ ತಿಳಿದ ತಕ್ಷಣ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ ಶೋಧ ಕಾರ್ಯ ನಡೆಸಿದ್ದಾರೆ. ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆಗೆ ಸರಿಯಾದ ಕಾರಣ ತಿಳಿದು ಬಂದಿಲ್ಲ. ಆದರೆ ಯಾವುದೋ ಹಣಕಾಸಿನ ವ್ಯವಹಾರದಲ್ಲಿ ಮೋಸವಾಗಿರುವ ಬಗ್ಗೆ ಅಲ್ಲಲ್ಲಿ ಚರ್ಚೆಗಳು ನಡೆಯುತ್ತಿದೆ. ಆತ್ಮಹತ್ಯೆ ಮಾಡಿಕೊಂಡಿರುವ ಶ್ರುತಿ ಅವರಿಗೆ ಹತ್ತನೇ ತರಗತಿ ಓದುತ್ತಿರುವ ಪುತ್ರಿ ಇದ್ದಾರೆ.

- Advertisement -

Latest News

error: Content is protected !!