Saturday, May 18, 2024
Homeಕರಾವಳಿಮಂಗಳೂರಿನಲ್ಲಿ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ತೆ

ಮಂಗಳೂರಿನಲ್ಲಿ ಕಾರಿನಲ್ಲಿ ಮಹಿಳೆಯ ಮೇಲೆ ಅತ್ಯಾಚಾರ ಆರೋಪ: ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ ಸಂತ್ರಸ್ತೆ

spot_img
- Advertisement -
- Advertisement -

ಮಂಗಳೂರು: ತನ್ನನ್ನು  ನಂಬಿಸಿ ಕಾರಿನಲ್ಲಿ  ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ವ್ಯಕ್ತಿಯೊಬ್ಬನ ವಿರುದ್ಧ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ‌ ಸಂತ್ರಸ್ತೆಯೊಬ್ಬರು ದೂರು ನೀಡಿದ್ದಾರೆ.

ಮಂಗಳೂರಿನ ಮಹಿಳೆಯೊಬ್ಬರು ಮೂಡಬಿದಿರೆಯ ವ್ಯಕ್ತಿಯೊಬ್ಬರನ್ನು ಮದುವೆಯಾಗಿದ್ದು ಸಾಂಸಾರಿಕ ಜೀವನದಲ್ಲಿ ಬಿರುಕು ಮೂಡಿತ್ತು. ಇವರ ವಿಚ್ಛೇದನ ಪ್ರಕರಣ ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿದೆ. ಇವರ ತಂದೆ – ತಾಯಿಯ ಮನೆ ಚಿಕ್ಕದಾಗಿರುವುದರಿಂದ ಎರಡು ತಿಂಗಳ ಹಿಂದೆ ಬೆಂಗರೆ ಕೂಳೂರು ಬಳಿ ಪ್ರಶಾಂತ್ ಅಪ್ಪು ಎಂಬವರ ಮನೆ ಬಾಡಿಗೆ ಪಡೆದಿದ್ದರು. ಅಲ್ಲಿ ಬಟ್ಟೆ ಬರೆ ಇಟ್ಟು ಬಂದ ಬಳಿಕ ಜ್ವರ ಬಂದಿದ್ದರಿಂದ ಬಾಡಿಗೆ ಮನೆಗೆ ಹೋಗದೆ ತಂದೆ ಮನೆಯಲ್ಲಿಯೇ ಇದ್ದರು. ಈ ನಡುವೆ ಇವರಿಂದ ಬಾಡಿಗೆ ಪಡೆದುಕೊಂಡ ಮನೆ ಮಾಲೀಕ ಪ್ರಶಾಂತ್ ಅಪ್ಪು ಈ ಮಹಿಳೆಯ ಬಟ್ಟೆಗಳನ್ನು ಕೊಂಡು ಹೋಗಲು ಒತ್ತಾಯ ಮಾಡಿದ್ದಾನೆ.

ಜುಲೈ 8 ರಂದು ಆತ ಕರೆ ಮಾಡಿ ಜುಲೈ 9 ಕ್ಕೆ ಬಟ್ಟೆಗಳನ್ನು ಕುಂಟಿಕಾನದ ಫ್ಲೈ ಓವರ್ ನ ಬಳಿ ತರುತ್ತೇನೆ ಎಂದು ತಿಳಿಸಿದ್ದನಂತೆ.ಅದರಂತೆ ಮಹಿಳೆ ಅಲ್ಲಿಗೆ ಹೋದ ಸಂದರ್ಭದಲ್ಲಿ ಬಟ್ಟೆ ತರಲು ಮರೆತು ಹೋಯಿತು. ಕಾರಿನಲ್ಲಿ ಹೋಗಿ ತರೋಣ ಎಂದು ಹೇಳಿ ಕಾರಿನಲ್ಲಿ ಕೂರಿಸಿದ್ದಾನೆ. ಬಳಿಕ ಜನ ಸಂಚಾರ ಇಲ್ಲದ ಜಾಗದಲ್ಲಿ ಕಾರು ನಿಲ್ಲಿಸಿ ಅತ್ಯಾಚಾರ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಅದೇ ಕಾರಿನಲ್ಲಿ ಮುಖ್ಯ ರಸ್ತೆ ಬಂದ ಬಳಿಕ ತಪ್ಪಿಸಿಕೊಂಡು ಹೋಗಿದ್ದಾನೆ. ಇದಾದ ಬಳಿಕ ಆರೋಪಿ, ಮಹಿಳೆಗೆ ಮದುವೆಯಾಗುವಂತೆ ಒತ್ತಾಯಿಸಿದ್ದಾನಂತೆ. ಮದುವೆಯಾಗದಿದ್ದರೆ ಕೊಲೆ ಮಾಡುವುದಾಗಿ ಬೆದರಿಸಿದ್ದಾನಂತೆ. ಈ ಬಗ್ಗೆ ಮಂಗಳೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

- Advertisement -
spot_img

Latest News

error: Content is protected !!