Sunday, June 7, 2026
Homeಕರಾವಳಿಉಡುಪಿಉಡುಪಿಯಲ್ಲಿ ಕೇವಲ 5 ಗಂಟೆ ಅಂತರದಲ್ಲಿ ಅಣ್ಣ ತಂಗಿ ಸಾವು

ಉಡುಪಿಯಲ್ಲಿ ಕೇವಲ 5 ಗಂಟೆ ಅಂತರದಲ್ಲಿ ಅಣ್ಣ ತಂಗಿ ಸಾವು

- Advertisement -
- Advertisement -

ಕುಂದಾಪುರ: ಕೇವಲ 5 ಗಂಟೆ ಅಂತರದಲ್ಲಿ ಅಣ್ಣ ಹಾಗೂ ತಂಗಿ ಮೃತಪಟ್ಟ ಘಟನೆ ಕುಂದಾಪುರದ ಬೆಳ್ವೆಯಲ್ಲಿ ಸಂಭವಿಸಿದೆ. ಬೆಳ್ವೆಯ ಸಮೀಪದ ಹೆದ್ದಾರಿ ಜೆಡ್ಡು ನಿವಾಸಿ ಸುಬ್ಬಣ್ಣ ನಾಯ್ಕ್ (65) ಹಾಗೂ ಅವರ ತಂಗಿ ಗಿರಿಜಾ(60) ಐದು ಗಂಟೆಗಳ ಅವಧಿಯಲ್ಲಿ ಮೃತಪಟ್ಟಿದ್ದಾರೆ.

ಅಪರಾಹ್ನ 2 ಗಂಟೆ ಸುಮಾರಿಗೆ ತಂಗಿ ಗಿರಿಜಾ ಹೃದಯಾಘಾತದಿಂದ ಮನೆಯಲ್ಲಿಯೇ ಮೃತಪಟ್ಟಿದ್ದರು. ಇದರಿಂದ ಆಘಾತಗೊಂಡಿದ್ದ ಅವರ ಅಣ್ಣ ಸುಬ್ಬಣ್ಣ ಅವರು ಕೂಡಾ 7 ಗಂಟೆ ಸುಮಾರಿಗೆ ಹೃದಯಾಘಾತದಿಂದ ಹಾಲಾಡಿಯ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಇವರಿಬ್ಬರು ಪ್ರತ್ಯೇಕ ಮನೆಯಲ್ಲಿ ವಾಸಿಸುತ್ತಿದ್ದರೂ, ಅಕ್ಕ- ಪಕ್ಕದಲೇ ಮನೆಯಿತ್ತು. ಗಿರಿಜಾ ಓರ್ವ ಪುತ್ರನನ್ನು ಅಗಲಿದ್ದಾರೆ. ಸುಬ್ಬಣ್ಣ ಪತ್ನಿ, ಪುತ್ರ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ

- Advertisement -

Latest News

error: Content is protected !!