- Advertisement -
- Advertisement -
ಭಟ್ಕಳ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಗರ್ಭಿಣಿ ಆಟೋದಲ್ಲಿಯೇ ಮಗುವಿಗೆ ಜನ್ಮ ನೀಡಿದ್ದಾರೆ. ಶುಕ್ರವಾರ ಮಧ್ಯಾಹ್ನ ಜಾಮಿಯಾಬಾದ್ ನಿವಾಸಿಯಾಗಿರುವ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಲು ಆಂಬುಲೆನ್ಸ್ ಗೆ ಕರೆ ಮಾಡಲಾಗಿದೆ.
ಆದರೆ, ಗಂಟೆಗಳ ಕಾಲ ಕಾದರೂ ಆಂಬುಲೆನ್ಸ್ ಬಾರದ ಕಾರಣ ಪತ್ನಿಯನ್ನು ರಸ್ತೆಯವರೆಗೂ ಎತ್ತಿಕೊಂಡು ಹೋದ ಪತಿ ಆಟೋದವರಿಗೆ ಕರೆಮಾಡಿದರೆ ಪಾಸ್ ಇಲ್ಲವೆಂದು ತಿಳಿಸಿದ್ದಾರೆ. ಕೊನೆಗೆ ಸ್ಥಳೀಯ ಆಟೋಚಾಲಕನ ಸಹಾಯದಿಂದ ಶಿರಾಲಿ ಆಸ್ಪತ್ರೆಗೆ ಮಹಿಳೆಯನ್ನು ಕರೆದುಕೊಂಡು ಹೋಗಿದ್ದು, ಆಸ್ಪತ್ರೆ ಆವರಣದಲ್ಲಿಯೇ ಆಟೋದಲ್ಲಿ ಹೆಣ್ಣು ಮಗು ಜನಿಸಿದೆ. ನಂತರ ಆಸ್ಪತ್ರೆಗೆ ದಾಖಲಿಸಿದ್ದು, ತಾಯಿ, ಮಗು ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.
- Advertisement -