- Advertisement -
- Advertisement -
ಉತ್ತರ ಪ್ರದೇಶದ ಸಂತಕ್ಬೀರ್ ನಗರದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಮೇ 17ರಂದು ಯುವತಿಯ ಮದುವೆ ನಿಶ್ಚಯವಾಗಿತ್ತು. ಆದ್ರೆ ಹಿಂದಿನ ವಾರ ಯುವತಿ ಮಗುವಿಗೆ ಜನ್ಮ ನೀಡಿದ್ದಾಳೆ.
ಮೂಲಗಳ ಪ್ರಕಾರ ಹೊಟ್ಟೆನೋವು ಕಾಣಿಸಿಕೊಂಡಿದ್ದರಿಂದ ಯುವತಿ, ತಾಯಿ ಜೊತೆ ಆಸ್ಪತ್ರೆಗೆ ಬಂದಿದ್ದಳು ಎನ್ನಲಾಗಿದೆ. ಚಿಕಿತ್ಸೆ ನಡೆಸಿದ ವೈದ್ಯರು ಹೆರಿಗೆ ಮಾಡಿಸಿದ್ದಾರೆ. ಯುವತಿ ಹೊಟ್ಟೆಯಲ್ಲಿ ಮಗು ಇರುವ ಸಂಗತಿ ತಿಳಿದ ಕುಟುಂಬಸ್ಥರು ದಂಗಾಗಿದ್ದಾರೆ. ಯಾರಿಗೂ ಹೇಳದಂತೆ ಮನವಿ ಮಾಡಿದ್ದಾರೆ.
ಆದ್ರೆ ವೈದ್ಯರು ಕುಟುಂಬ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಬಂದ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
- Advertisement -