ಮಂಗಳೂರು: ಅಂಬುಲೆನ್ಸ್‌ನಲ್ಲಿ ಪ್ರಯಾಣಿಸಿ ಗಡಿ ದಾಟಲು ಯತ್ನಿಸಿದ 7 ಮಂದಿಯನ್ನು ಪೊಲೀಸರು ಬಂಧಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ನಡೆದಿದೆ.
ಪುತ್ತೂರಿನ ಮಹಮ್ಮದ್ ಜುನೈದ್, ಮಹಮ್ಮದ್ ಇಲ್ಯಾಸ್, ಸಲೀಮುದ್ದೀನ್ ಯಾನೆ ಪಾಪು, ಅಬ್ದುಲ್ ರಜಾಕ್, ರಶೀದ್, ಸಂಶುದ್ದೀನ್ ಹಾಗೂ ಮಹಮ್ಮದ್ ಇರ್ಷಾದ್ ಬಂಧಿತರು.
ಲಾಕ್‍ಡೌನ್ ನಿಯಮವನ್ನು ಉಲ್ಲಂಘಿಸಿ ಪುತ್ತೂರಿನ ಏಳು ಮಂದಿ ಕೆಎ-51 ಎಬಿ-3455 ರಿಜಿಸ್ಟ್ರೇಷನ್ ನಂಬರಿನ ಅಂಬುಲೆನ್ಸ್‌ನಲ್ಲಿ ನಿನ್ನೆ ರಾತ್ರಿ ಮೈಸೂರು ಕಡೆ ಹೊರಟಿದ್ದರು.
ಕೊಡಗು ಜಿಲ್ಲೆಯ ಕುಶಾಲನಗರ ಸರಹದ್ದಿನ ಕೊಪ್ಪದಲ್ಲಿ ಇವರನ್ನು ತಡೆದ ಪೊಲೀಸರು ತಪಾಸಣೆ ನಡೆಸಿದ್ದರು. ಈ ವೇಳೆ ಆರೋಪಿಗಳು ಯಾವುದೇ ತುರ್ತು ಸೇವೆಗೆ ಹೋಗದೇ ಲಾಕ್‍ಡೌನ್ ನಿಯಮದಿಂದ ತಪ್ಪಿಸಿಕೊಳ್ಳಲು ಹೋಗುತ್ತಿರುವ ವಿಚಾರ ತಿಳಿದು ಮುಂದಿತ್ತು. ಹೀಗಾಗಿ ಅವರನ್ನು ಎಲ್ಲಿಗೂ ಹೋಗಲು ಬಿಡದೇ ವಾಪಸ್ ಕಳುಹಿಸಿದ್ದರು. ಹಿಂತಿರುಗಿ ಮತ್ತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರವೇಶಿಸುವಾಗ ಪುತ್ತೂರು ಪೊಲೀಸರು ಅಂಬುಲೆನ್ಸ್‍ನಲ್ಲಿ ಇದ್ದ ಏಳು ಮಂದಿಯನ್ನ ಬಂಧಿಸಿ, ಆರೋಪಿಗಳ ವಿರುದ್ಧ ಸುಮೊಟೋ ಪ್ರಕರಣ ದಾಖಲಿಸಿದ್ದಾರೆ.