ಕಡಬ; ಕಾಲು ಜಾರಿ ಕುಮಾರಧಾರ ನದಿಗೆ ಬಿದ್ದು ಮಹಿಳೆ ಸಾವನ್ನಪ್ಪಿರುವ ಘಟನೆ ಕಡಬ ತಾಲೂಕಿನ ಆಲಂಕಾರಿನ ಶಾಂತಿಮೊಗರುವಿನಲ್ಲಿ ನಡೆದಿದೆ. ಇಲ್ಲಿನ ನಗ್ರಿ ನಿವಾಸಿ ಬೆಳ್ತರವರ ಪತ್ನಿ ಕೊರಪ್ಪೋಳು(65) ಮೃತರು.
ಕೊರಪ್ಪೋಳು ಅವರು ಆತೂರಿಗೆ ಔಷಧಿ ತರಲೆಂದು ಬಂದಿದ್ದರು. ಅಲ್ಲಿಂದ ಆಲಂಕಾರಿನವರೆಗೆ ಬಸ್ಸಲ್ಲಿ ಬಂದು ಆಲಂಕಾರಿನಿಂದ ಶಾಂತಿಮೊಗರುವಿಗೆ ಬಂದು ಅಲ್ಲಿ ಕುಮಾರಧಾರ ಅಣೆಕಟ್ಟಿನ ಚಿಕ್ಕದಾದ ರಸ್ತೆಯಲ್ಲಿ ನಡೆದುಕೊಂಡು ಹೋಗುವಾಗ ಕಾಲುಜಾರಿ ನದಿಗೆ ಬಿದ್ದಿರಬಹುದು ಎನ್ನಲಾಗಿದೆ. ಮೃತರು ಪತಿ ಒರ್ವ ಪುತ್ರ ಸೇರಿದಂತೆ ನಾಲ್ಕು ಪುತ್ರಿಯರನ್ನು ಅಗಲಿದ್ದಾರೆ.
ಸ್ಥಳೀಯ ಯುವಕರು ಬೋಟಿಂಗ್ ಗೆ ಬಂದ ಸಮಯದಲ್ಲಿ ಮಹಿಳೆಯ ಶವ ಸಿಕ್ಕಿದೆ. ಇನ್ನು ಮಹಿಳೆಯನ್ನು ಪರಿಶೀಲಿಸಿದ್ದಾಗ, ಬೆಳಿಗ್ಗೆ ತೆಗೆದುಕೊಂಡ ಔಷದಿ ಆಧಾರ್ ಮತ್ತು ಆತೂರಿನಿಂದ ಆಲಂಕಾರಿಗೆ ಪ್ರಯಾಣಿಸಿದ ಬಸ್ ಟಿಕೇಟ್ ಸಿಕ್ಕಿದ್ದು ಆಧಾರ್ ವಿಳಾಸದ ಆಧಾರದಲ್ಲಿ ಮೃತ ಮಹಿಳೆಯ ಮನೆಯವರನ್ನು ಸಂಪರ್ಕಿಸಲಾಗಿದೆ. ಪುತ್ರ ಭಾಸ್ಕರ ನೀಡಿರುವ ದೂರಿಂತೆ ಕಡಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಶವವನ್ನು ನದಿಯಿಂದ ತೆರವುಗೊಳಿಸಿ ಮಹಜರಿಗೆ ಕಡಬಕ್ಕೆ ತೆಗೆದುಕೊಂಡು ಹೋಗಲಾಯಿತು.


