Monday, May 13, 2024
Homeತಾಜಾ ಸುದ್ದಿಫ್ಯಾನ್ಸಿ ಸ್ಟೋರ್ ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ

ಫ್ಯಾನ್ಸಿ ಸ್ಟೋರ್ ಗೆ ನುಗ್ಗಿ ಯುವತಿಯ ಬರ್ಬರ ಹತ್ಯೆ

spot_img
- Advertisement -
- Advertisement -

ಕೋಲಾರ: ಫ್ಯಾನ್ಸಿ ಸ್ಟೋರ್ ಗೆ ನುಗ್ಗಿ ಯುವತಿಯೊಬ್ಬಳನ್ನು ಬರ್ಬರವಾಗಿ ಹತ್ಯೆ ಮಾಡಿರುಪವ ಘಟನೆ ಕೋಲಾರದ  ಮಹಾಲಕ್ಷ್ಮೀ ಲೇಔಟ್​ನಲ್ಲಿ ನಡೆದಿದೆ.

ಕೋಲಾರ ತಾಲೂಕಿನ ನಾಗನಾಯಕನಹಳ್ಳಿಯ ನೀಲವೇಣಿ (29) ಕೊಲೆಯಾದ ದುರ್ದೈವಿ. ನೀಲವೇಣಿ  ಮಹಾಲಕ್ಷ್ಮಿ ಲೇಔಟ್​ನಲ್ಲಿ ಫ್ಯಾನ್ಸಿ ಸ್ಟೋರ್ ನಡೆಸಿಕೊಂಡು ಜೀವನ ಸಾಗಿಸುತ್ತಿದ್ದಳು.

ಇಂದು ಹಾಡಹಗಲೇ ಫ್ಯಾನ್ಸಿ ಸ್ಟೋರ್​ಗೆ ನುಗ್ಗಿದ್ದ ಅಪರಿಚಿತರು ಮಾರಕಾಸ್ತ್ರಗಳಿಂದ ಮನಸೋಇಚ್ಛೆ ಹಲ್ಲೆ ಮಾಡಿ ಕೊಂದು ಪರಾರಿಯಾಗಿದ್ದಾರೆ. ಸ್ಟೋರ್ ಒಳಗೆ ಅಪರಿಚಿತರು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಕೋಲಾರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -
spot_img

Latest News

error: Content is protected !!