Thursday, June 4, 2026
Homeತಾಜಾ ಸುದ್ದಿಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಟಿಕ್ ಟಾಕ್ ಖ್ಯಾತಿಯ ಫನ್ ಬಕೆಟ್ ಭಾರ್ಗವ್ ಬಂಧನ

ಅಪ್ರಾಪ್ತೆ ಮೇಲೆ ಅತ್ಯಾಚಾರ ಪ್ರಕರಣ: ಟಿಕ್ ಟಾಕ್ ಖ್ಯಾತಿಯ ಫನ್ ಬಕೆಟ್ ಭಾರ್ಗವ್ ಬಂಧನ

- Advertisement -
- Advertisement -

ಆಂಧ್ರಪ್ರದೇಶ : ಟಿಕ್ ಟಾಕ್ ಖ್ಯಾತಿಯ ಚಿಪ್ಪಾಡಾ ಭಾರ್ಗವ್ ಅಲಿಯಾಸ್ ಫನ್ ಬಕೆಟ್ ಭಾರ್ಗವ್ ಅವರನ್ನು ವಿಶಾಖಪಟ್ಟಣಂನಲ್ಲಿ 14 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇಲೆ ಆಂಧ್ರ ಪೊಲೀಸರು ಬಂಧಿಸಿದ್ದಾರೆ.

ಭಾರ್ಗವ್ ಕಾಮಿಕ್ ಟಿಕ್ ಟಾಕ್ ವೀಡಿಯೊಗಳೊಂದಿಗೆ ಜನಪ್ರಿಯತೆ ಗಳಿಸಿದ್ದರು, ಅವರ ‘ಓ ಮೈ ಗಾಡ್! ಓ ಮೈ ಗಾಡ್!’ ಸಾಲು, ಟ್ವಿಟರ್, ನೆಟ್ ಫ್ಲಿಕ್ಸ್ ಮತ್ತು ಸ್ವಿಗ್ಗಿ ಸೇರಿದಂತೆ ಹಲವಾರು ಬ್ರಾಂಡ್ ಗಳಿಂದಲೂ ಬಳಕೆ ಮಾಡಲಾಯಿತು. ಸಂತ್ರಸ್ತೆಯ ಕುಟುಂಬ ಸದಸ್ಯರು ಏಪ್ರಿಲ್ 19 ರಂದು ವಿಶಾಖಪಟ್ಟಣಂ ಕಮಿಷನರೇಟ್ ಅಡಿಯಲ್ಲಿ ಪೆಂಡುರ್ತಿ ಪೊಲೀಸ್ ಠಾಣೆಗೆ ದೂರು ನೀಡಿದಾಗ ಲೈಂಗಿಕ ದೌರ್ಜನ್ಯ ಬೆಳಕಿಗೆ ಬಂದಿದೆ. ಸಂತ್ರಸ್ತೆ ನಾಲ್ಕು ತಿಂಗಳ ಗರ್ಭಿಣಿ ಎಂದು ಕುಟುಂಬಕ್ಕೆ ತಿಳಿದ ನಂತರ ದೂರು ದಾಖಲಿಸಲಾಗಿದೆ. ನಂತರ ಆರೋಪಿಯನ್ನು ಆಂಧ್ರ ಪೊಲೀಸರು ಹೈದರಾಬಾದ್ ನ ಕೊಂಪಲ್ಲಿಯಲ್ಲಿ ಬಂಧಿಸಿದ್ದಾರೆ.

- Advertisement -

Latest News

error: Content is protected !!