- Advertisement -
- Advertisement -
ಬೆಳ್ತಂಗಡಿ ; ಪದ್ಮಾಂಬ ಕ್ಯಾಟರ್ಸ್ ನ ಮಾಲೀಕ ಸುನಿಲ್ ಅವರ ಪತ್ನಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅಳದಂಗಡಿ ಕುಬಲಾಜೆ ಮನೆಯ ಪದ್ಮಾಂಬ ಕ್ಯಾಟರರ್ಸ್‌ನ ನಾಗಕುಮಾರ್ ಅವರ ಮಗ ಸುನಿಲ್ ಅವರ ಪತ್ನಿ ಕಾವ್ಯಾ(32) ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಾವ್ಯ ಮತ್ತು ಸುನಿಲ್ ದಂಪತಿಗಳಿಗೆ ಇಬ್ಬರು ಮಕ್ಕಳಿದ್ದಾರೆ.ಪತಿ ಸುನಿಲ್ ಜೊತೆ ಪತ್ನಿ ಕಾವ್ಯ ಕೂಡ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದರು. ಇನ್ನು ಕಾವ್ಯ ಅತ್ಮಹತ್ಯೆಗೆ ಕಾರಣ ಏನು ಎಂದು ತಿಳಿದು ಬಂದಿಲ್ಲ.ಈ ಬಗ್ಗೆ ವೇಣೂರು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -