Saturday, June 13, 2026
Homeಕರಾವಳಿಬೆಳ್ತಂಗಡಿ : 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ:ಅಕ್ರಮ ಗೋ ಸಾಗಾಟ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ...

ಬೆಳ್ತಂಗಡಿ : 8 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದ ಆರೋಪಿ:ಅಕ್ರಮ ಗೋ ಸಾಗಾಟ ಆರೋಪಿಯನ್ನು ಬಂಧಿಸಿದ ಧರ್ಮಸ್ಥಳ ಪೊಲೀಸರು

- Advertisement -
- Advertisement -

ಬೆಳ್ತಂಗಡಿ : ಅಕ್ರಮ ದನ ಸಾಗಾಟ ಪ್ರಕರಣದ ಆರೋಪಿ ಜಾಮೀನು ಪಡೆದುಕೊಂಡ ಬಳಿಕ ಬೆಳ್ತಂಗಡಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಧರ್ಮಸ್ಥಳ ಪೊಲೀಸರು ಯಶಸ್ವಿಯಾಗಿದ್ದಾರೆ. ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ಹೈಯರ್ ನಗರ ನಿವಾಸಿ ವಾಜೀದ್ ಪಾಷಾ(54) ಬಂಧಿತ ಆರೋಪಿ.

ವಾಜೀದ್ ಅಕ್ರಮ ಗೋ ಗೋ ಸಾಗಾಟ ಪ್ರಕರಣದಲ್ಲಿ ಬಂಧಿತನಾಗಿ ಬಳಿಕ ಜಾಮೀನು ಪಡೆದು  ವಿಚಾರಣೆಗೆ ಹಾಜರಾಗದೇ  ಸುಮಾರು 8 ವರ್ಷದಿಂದ ತಲೆಮರೆಸಿಕೊಂಡು ಊರು ಬಿಟ್ಟು ಬೇರೆ ಕಡೆ ವ್ಯಾಪಾರ ಮಾಡಿಕೊಂಡಿದ್ದ. ಈತ ಹಾಸನಕ್ಕೆ ಬರುತ್ತಿರುವ ಬಗ್ಗೆ ಮಾಹಿತಿ ಕಲೆ ಹಾಕಿ ಜ.17 ರಂದು  17.30 ಗಂಟೆಗೆ ಹಾಸನ ಜಿಲ್ಲಾ,ಹೊಳೆನರಸೀಪುರ  ತಾಲೂಕು ಲಕ್ಕೂರು ಬಸ್ಸು ತಂಗುದಾಣದ ಬಳಿ ಬೆಳ್ತಂಗಡಿ ಸರ್ಕಲ್‌ ಇನ್ಸ್ಪೆಕ್ಟರ್  ನಾಗೇಶ್ ಕದ್ರಿ ಹಾಗೂ  ಧಮ೯ಸ್ಥಳ ಠಾಣಾ ಸಬ್ ಇನ್ಸ್ಪೆಕ್ಟರ್  ಅನೀಲ್ ಕುಮಾರ್.ಡಿ.(ಕಾ.ಸು) ಮತ್ತು ಸಬ್ ಇನ್ಸ್ಪೆಕ್ಟರ್ ಸಮರ್ಥ ಆರ್ ಗಾಣಿಗೆರ್ (ತನಿಖೆ)ರವರ ಮಾಗ೯ದರ್ಶನದಂತೆ  ಧರ್ಮಸ್ಥಳ ಠಾಣಾ ಸಿಬ್ಬಂದಿ ರಾಜೇಶ್ ಎನ್ , ಗೋವಿಂದ ರಾಜ್, ಮಲ್ಲಿಕಾರ್ಜುನ್ ರವರು ಬಂಧಿಸಿ ಮಾಡಿ, ಬೆಳ್ತಂಗಡಿJMFC ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯ ದಂಡ ವಿಧಿಸಿದೆ.

- Advertisement -

Latest News

error: Content is protected !!