Thursday, June 4, 2026
Homeಕರಾವಳಿಬೆಳ್ತಂಗಡಿ; ಹೆರಿಗೆ ವೇಳೆ ಹಾಕಿದ ಸ್ಟಿಚ್ ನ ನೋವು ತಾಳಲಾರದೆ ಬಾಣಂತಿ ಆತ್ಮಹತ್ಯೆ

ಬೆಳ್ತಂಗಡಿ; ಹೆರಿಗೆ ವೇಳೆ ಹಾಕಿದ ಸ್ಟಿಚ್ ನ ನೋವು ತಾಳಲಾರದೆ ಬಾಣಂತಿ ಆತ್ಮಹತ್ಯೆ

- Advertisement -
- Advertisement -

ಬೆಳ್ತಂಗಡಿ; ಹೆರಿಗೆ ವೇಳೆ ಹಾಕಿದ ಸ್ಟಿಚ್ ನ ನೋವು ತಾಳಲಾರದೆ ಬಾಣಂತಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವೇಣೂರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಇಲ್ಲಿನ ಸುಲ್ಕೇರಿಮೊಗ್ರು ಗ್ರಾಮದ ಜಾರಿಗೆದಡಿ ನಿವಾಸಿ ಆನಂದ ಮಲೆಕುಡಿಯ ಅವರ ಪತ್ನಿ ಸುಪ್ರೀತಾ ಅವರಿಗೆ ಆ.1ರಂದು ಉಡುಪಿಯಲ್ಲಿ ಹೆರಿಗೆಯಾಗಿತ್ತು. ಈ ವೇಳೆ  ಗಾಯಕ್ಕೆ ಹೊಲಿಗೆ ಹಾಕಲಾಗಿತ್ತು.

ಹೊಲಿಗೆ ಹಾಕಿದ ಬಳಿಕ  ವಿಪರೀತ ನೋವು ಕಾಣಿಸಿತ್ತು. ಇದರಿಂದ ನೊಂದ ಸುಪ್ರೀತಾ ಅವರು ಆ. 26ರಂದು ಕೀಟನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತಕ್ಷಣ ಅವರಿಗೆ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ಮಂಗಳೂರು ವೆನ್ಲಾಕ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ ಅಲ್ಲಿ ಅವರು ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.ಈ ಬಗ್ಗೆ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Latest News

error: Content is protected !!