Wednesday, June 3, 2026
Homeತಾಜಾ ಸುದ್ದಿಪ್ರೀತಿಸಿ ಮದುವೆಯಾಗೋದು, ಕೈಕೊಡೊದು ಇದೇ ಈಕೆಯ ಕಾಯಕ: 18 ಯುವಕರಿಗೆ ಕೈಕೊಟ್ಟ ಖತರ್ನಾಕ್ ಲೇಡಿಯ ಕಥೆ...

ಪ್ರೀತಿಸಿ ಮದುವೆಯಾಗೋದು, ಕೈಕೊಡೊದು ಇದೇ ಈಕೆಯ ಕಾಯಕ: 18 ಯುವಕರಿಗೆ ಕೈಕೊಟ್ಟ ಖತರ್ನಾಕ್ ಲೇಡಿಯ ಕಥೆ ಕೇಳಿದ್ರೆ ನೀವು ದಂಗಾಗ್ತೀರಾ…

- Advertisement -
- Advertisement -

ರಾಜಸ್ಥಾನ: ಮದುವೆ ಮಾಡಿಕೊಂಡು ಸುಮಾರು 18 ಯುವಕರಿಗೆ ವಂಚಿಸಿದ ಆಂಧ್ರ ಮೂಲದ ಯುವತಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ.

ಬಂಧಿತಳನ್ನು ಭಾಗವತಿ ಅಲಿಯಾಸ್​ ಅಂಜಲಿ ಎಂದು ಗುರುತಿಸಲಾಗಿದೆ. ಈಕೆಯೊಂದಿಗೆ ಇತರೆ 5 ಮಂದಿಯನ್ನು ಸಹ ಪೊಲೀಸರು ಬಂಧಿಸಿದ್ದಾರೆ. ತಮ್ಮ ಸಮುದಾಯದಲ್ಲಿ ತಡವಾಗಿ ಮದುವೆ ಆಗುವ ಪದ್ಧತಿಯನ್ನೇ ಬಂಡವಾಳ ಮಾಡಿಕೊಂಡ ಅಂಜಲಿ ಸುಮಾರು 18 ಯುವಕರನ್ನು ಮದುವೆಯಾಗಿ ಅವರಿಂದ ಹಣ ಮತ್ತು ಆಭರಣವನ್ನು ಕಸಿದುಕೊಂಡು ವಂಚಿಸಿದ್ದಾಳೆ.

ಆರೋಪಿಗಳ ಗ್ಯಾಂಗ್​ ಗುಜರಾತ್​ನ ಜನಾಗಢದಲ್ಲಿ ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಅಂಜಲಿ ಗ್ಯಾಂಗ್​ ಗುಜರಾತ್​, ಮಧ್ಯ ಪ್ರದೇಶ, ರಾಜಸ್ಥಾನ ಮತ್ತು ಇತರೆ ರಾಜ್ಯಗಳ ಯುವಕರನ್ನು ಗುರಿಯಾಗಿರಿಸಿಕೊಂಡು ಪ್ರೀತಿಯ ಹೆಸರಲ್ಲಿ ನಂಬಿಸಿ, ಮದುವೆಯನ್ನು ಮಾಡಿಕೊಂಡು ಅವರಿಂದ ಆಭರಣ ಮತ್ತು ಹಣವನ್ನು ಪಡೆದುಕೊಂಡು ವಂಚಿಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಜುನಾಗಢದ ಅಂಬಾಲಿಯಾದಲ್ಲಿ ಯುವಕನನ್ನು ಮದುವೆ ಆಗಿದ್ದ ಅಂಜಲಿ, ಆತನ ಮನೆಯಲ್ಲಿ ಆಭರಣ ಮತ್ತು 5 ಲಕ್ಷ ಮೌಲ್ಯದ ಹಣವನ್ನು ದೋಚಿ ಪರಾರಿಯಾಗಿದ್ದಳು. ಈ ಸಂಬಂಧ ಮೋಸ ಹೋದ ಯುವಕ ಅಂಜಲಿ ವಿರುದ್ಧ ದೂರು ನೀಡಿದ್ದನು.

ಅಂಜಲಿ, ಆಕೆಯ ತಾಹಿ ಧನುಬೆನ್​ ಸೇರಿ ನಾಲ್ವರನ್ನು ಬಂಧಿಸಲಾಗಿದೆ. ಈಕೆ ಗುಜರಾತ್​ನ ರಾಜ್​ಕೋಟ್​ ಏರಿಯಾದಲ್ಲಿ ಅಂಜಲಿ ಹೆಸರಿನ ದಾಖಲಾತಿಗಳಲ್ಲಿ ವಾಸಿಸುತ್ತಿದ್ದಳು. ಮದುವೆ ಮಾಡಿಕೊಂಡು ಅನೇಕ ಕೆಲವು ದಿನಗಳವರೆಗೆ ಅವರೊಟ್ಟಿಗೆ ಇದ್ದು, ಬಳಿಕ ಚಿನ್ನಾಭರಣ ಮತ್ತು ಹಣ ದೋಚಿ ಪರಾರಿಯಾಗುವುದೇ ಇವರ ಕೆಲಸವಾಗಿತ್ತು. ಕೊನೆಗೂ ರಾಜಸ್ಥಾನ ಪೊಲೀಸರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. 

- Advertisement -

Latest News

error: Content is protected !!