Saturday, May 4, 2024
Homeತಾಜಾ ಸುದ್ದಿಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ: ಹೆಂಡತಿ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಪಾಪಿ ಪತಿ

ಪತ್ನಿಯ ಮೇಲೆ ಅಕ್ರಮ ಸಂಬಂಧದ ಅನುಮಾನ: ಹೆಂಡತಿ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಪಾಪಿ ಪತಿ

spot_img
- Advertisement -
- Advertisement -

ಉತ್ತರಪ್ರದೇಶ: ಪತ್ನಿಗೆ ಅಕ್ರಮ ಸಂಬಂಧ ಹೊಂದಿದ್ದಾಳೆ ಅನ್ನೋ ಅನುಮಾನದಿಂದ ಪತಿಯೊಬ್ಬ ಪತ್ನಿಯ ಗುಪ್ತಾಂಗವನ್ನು‌ ಅಲೂಮಿನಿಯಂ ತಂತಿಯಿಂದ ಹೊಲಿದ ಕ್ರೂರ ಘಟನೆ ಉತ್ತರ ಪ್ರದೇಶದ ರಾಮ್ ಪುರ್ ಜಿಲ್ಲೆಯ ಮಿಲಾಕ್ ಪ್ರದೇಶದಲ್ಲಿ ನಡೆದಿದೆ.

ಚಾಲಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ತನ್ನ ಪತ್ನಿಗೆ ‘ಫಿಡೆಲಿಟಿ ಟೆಸ್ಟ್’ ತೆಗೆದುಕೊಳ್ಳುವಂತೆ ಹೇಳಿದ್ದಾನೆ, ಅದಕ್ಕೆ ಒಪ್ಪಿದ್ದಾಳೆ. ನಂತರ ಆಕೆಯ ಕೈ ಮತ್ತು ಕಾಲುಗಳನ್ನು ಕಟ್ಟಿ ಆಕೆಯ ಜನನಾಂಗವನ್ನು ಅಲ್ಯೂಮಿನಿಯಂ ದಾರದಿಂದ ಹೊಲಿಗೆ ಹಾಕಿದ್ದಾನ. ಆಕೆಯ ಜನನಾಂಗದಿಂದ ರಕ್ತಸ್ರಾವ ಆಗುತ್ತಿದ್ದಾಗ ಹಾಗೇ ಬಿಟ್ಟಿದ್ದಾನೆ ಪಾಪಿ ಪತಿ.

ಮಗಳನ್ನು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೇರಿಸಿ, ಅಳಿಯನ ವಿರುದ್ಧ ಮಿಲಾಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಪೊಲೀಸರ ಮನವಿ ಮೇರೆಗೆ ರಾಂಪುರದ ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯರು ಮಹಿಳೆಯ ವೈದ್ಯಕೀಯ ಪರೀಕ್ಷೆ ನಡೆಸಿದರು. ಹಲ್ಲೆ ಯನ್ನು ವೈದ್ಯರು ಖಚಿತಪಡಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದು, ಸೂಕ್ತ ಸೆಕ್ಷನ್ ಗಳ ಅಡಿಯಲ್ಲಿ ಪತಿಯನ್ನು ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

‘ನನ್ನ ಪತಿ ಅನೇಕ ಬಾರಿ ವಿನಾಕಾರಣ ನನ್ನನ್ನು ನಿಂದಿಸುತ್ತಾರೆ. ನಾನು ವಿವಾಹೇತರ ಸಂಬಂಧ ಹೊಂದುತ್ತಿದ್ದೇನೆ ಎಂದು ಆತ ಅನುಮಾನಿಸಿ, ನನ್ನ ನಿರಪರಾಧಿತ್ವವನ್ನು ಸಾಬೀತು ಮಾಡಲು ನನ್ನನ್ನು ಕೇಳಿಕೊಂಡಿದ್ದಾನೆ. ಆತ ಇಂತಹ ಘೋರ ಕೃತ್ಯದಲ್ಲಿ ತೊಡಗುತ್ತಾನೆ ಎಂದು ನಾನು ಊಹಿಸಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ಎರಡು ವರ್ಷಗಳ ಹಿಂದೆ ಆರೋಪಿಯೊಂದಿಗೆ ವಿವಾಹವಾಗಿದ್ದ ಮಹಿಳೆ, ದಂಪತಿಗೆ ಹೆರಿಗೆಯಾದ ಕೆಲವೇ ದಿನಗಳಲ್ಲಿ ಮಗು ಸಾವನ್ನಪ್ಪಿತ್ತು, ಎಂದು ಪೊಲೀಸರು ತಿಳಿಸಿದ್ದಾರೆ.ಮಹಿಳೆ ಗಂಭೀರವಾಗಿ ಗಾಯಗೊಂಡಿರುವುದನ್ನು ರಾಂಪುರ ಪೊಲೀಸ್ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ (ಎಸ್ ಪಿ) ಖಚಿತಪಡಿಸಿದ್ದಾರೆ.

- Advertisement -
spot_img

Latest News

error: Content is protected !!